ಶಿರಸಿ :ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ, ನೂರೈವತ್ತು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ಶ್ರೀ ಮಾರಿಕಾಂಬಾ ಪ್ರೌಢಶಾಲೆ ಕೊಠಡಿಗಳಿಗೆ ಸಂಪೂರ್ಣ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡಿದ್ದು, ವರ್ಷಾಂತ್ಯಕ್ಕೆ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಉಳಿತಾಯ ಮಾಡಲಾಗಿದೆ.
ಈ ಶಾಲೆಯು ಶೈಕ್ಷಣಿಕ ಗುಣಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ಇಲ್ಲಿಗೆ ಕಲಿಯಲು ಅಂತರ್ರಾಜ್ಯದಿಂದಲೂ ಮಕ್ಕಳು ಬರುತ್ತಾರೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಜ್ಞಾನ ದೀವಿಗೆಯಾಗಿರುವ ನಗರದ ಮಾರಿಕಾಂಬಾ ಪ್ರೌಢಶಾಲೆಯು ತನ್ನ ಶೈಕ್ಷಣಿಕ ಗುಣಮಟ್ಟ, ಕಾಳಜಿ, ಸೌಲಭ್ಯಗಳ ಮೂಲಕವಾಗಿ ರಾಜ್ಯದ ಗಮನ ಸೆಳೆದಿದೆ.ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತವಾದಾಗ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಕಷ್ಟವಾಗುತ್ತಿತ್ತು. ಇದನ್ನು ಗಮನಿಸಿದ ಆಡಳಿತಾಧಿಕಾರಿಗಳು ಸೋಲಾರ್ ವ್ಯವಸ್ಥೆ ಕಲ್ಪಿಸುವುದಾಗಿ ಹೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಹೆಸ್ಕಾಂ ಸಮ್ಮತಿ ಸೂಚಿಸಿದ್ದು, ಇದೀಗ ಆ ಶಾಲೆಯಲ್ಲಿ ವಿದ್ಯುತ್ ಕಡಿತವಾದರೂ ಸೋಲಾರ್ ಬೆಳಕಿನಲ್ಲಿ ಮಕ್ಕಳು ಓದಿಕೊಳ್ಳಬಹುದಾಗಿದೆ.
ಸೋಲಾರ್ ಅಳವಡಿಸಲು 10ಲಕ್ಷ ರೂ. ವೆಚ್ಚ