ಕಾರವಾರ: ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದರೂ ಯೋಜನೆ ಲಾಭ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ. ಈ ಕುರಿತು ಜಾಗೃತಿಗೆ ಮುಂದಾಗಿರುವ ಮಹಿಳಾ ಸದಸ್ಯರನ್ನೊಳಗೊಂಡ ಸ್ಕೇಟಿಂಗ್ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಹೊರಟಿದೆ.
ದೇಶದಲ್ಲಿನ ಇಂತಹ ವಿವಿಧ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ 20 ರೋಲರ್ ಸ್ಕೇಟರ್ಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅತುಲ್ಯ ಭಾರತ ರೋಲರ್ ಸ್ಕೇಟಿಂಗ್ ಸಂಕಲ್ಪಿತ ಯಾತ್ರೆಯೊಂದನ್ನು ಹಮ್ಮಿಕೊಳ್ಳಲಾಗಿದೆ.
10 ಜನ ಮಹಿಳೆಯರು ಹಾಗೂ 10 ಜನ ಪುರಷರನ್ನೊಳಗೊಂಡ ತಂಡ ಈಗಾಗಲೇ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ 5 ಸಾವಿರಕ್ಕೂ ಹೆಚ್ಚು ಕಿ.ಮೀ ಕ್ರಮಿಸಿ ಕರ್ನಾಟಕದ ಕಾರವಾರ ಪ್ರವೇಶಿಸಿದೆ. ಸೋನಿ ಚೌರಾಸಿಯಾ ಅವರ ನೇತೃತ್ವದಲ್ಲಿ ಹೊರಟಿರುವ ರೋಲರ್ ಸ್ಕೇಟರ್ಗಳು ರಸ್ತೆ ಮಧ್ಯೆ ಸಿಗುವ ಹಳ್ಳಿಗಳಿಗೆ ತೆರಳಿ ಜನರಲ್ಲಿ ರಕ್ತಹೀನತೆ ಮುಕ್ತ, ಅಪೌಷ್ಠಿಕತೆ ಮುಕ್ತ ಭಾರತದ ಬಗ್ಗೆ, ಮಹಿಳಾ ಶಿಕ್ಷಣ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.