ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ 13 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್ ಆಗಿದೆ.
ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಸಿಬ್ಬಂದಿಗೆ ಕೊರೊನಾ... ದೇವಾಲಯ ಸೀಲ್ಡೌನ್! - ಕೊರೊನಾ ಶಾಕ್
ದೇವಸ್ಥಾನದ ಸಿಬ್ಬಂದಿ ಸಂಪರ್ಕದಿಂದಲೇ ಇತರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಇದೀಗ ಮತ್ತಷ್ಟು ಆತಂಕ ಶುರುವಾಗಿದೆ.
ನಿನ್ನೆ ದೇವಸ್ಥಾನದ ಎಲ್ಲಾ ಸಿಬ್ಬಂದಿಗಳು ಆರೋಗ್ಯವಂತರಾಗಿದ್ದಾರೆ ಎಂಬ ಪ್ರಕಟಣೆ ನೀಡಿದ್ದ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಗೆ ಇದೀಗ ಕೋವಿಡ್ ಆಘಾತ ಎದುರಾಗಿದ್ದು, ದೇವಾಲಯದ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ದೇವಾಲಯವನ್ನು ಪುನಃ ಸೀಲ್ಡೌನ್ ಮಾಡಲಾಗಿದೆ.
ದೇವಸ್ಥಾನದ 13 ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದೇವಸ್ಥಾನವನ್ನು ಸೀಲ್ಡೌನ್ ಮಾಡಲಾಗಿದೆ. ದೇವಸ್ಥಾನದಲ್ಲಿ ಕೆಲಸ ಮಾಡುವ ಕ್ಲರ್ಕ್ ಸೇರಿದಂತೆ ಸಫಾಯಿ ಕರ್ಮಚಾರಿಗೂ ಕೊರೊನಾ ಬಿಸಿ ತಟ್ಟಿದೆ. ಈ ಹಿಂದೆ ದೇವಸ್ಥಾನದ ಭಕ್ತನಿಗೆ ಕೊರೊನಾ ಬಂದ ಕಾರಣ ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿತ್ತು.
ಈಗ ಅದೇ ಭಕ್ತನ ಪ್ರಾಥಮಿಕ ಸಂಪರ್ಕದಿಂದ ದೇವಾಲಯದ ಸಿಬ್ಬಂದಿಗಳಿಗೆ ಕೊವಿಡ್ ಸೋಂಕು ತಗುಲಿದ್ದು, ದೇವಾಲಯದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಇದರಿಂದ ಸಿಬ್ಬಂದಿಗಳ ಮನೆಗಳನ್ನು ಸೀಲ್ ಮಾಡಿ, ಅವರ ಕುಟುಂಬಸ್ಥರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದ್ದು, ಎಲ್ಲರ ಗಂಟಲು ದ್ರವ ಸಂಗ್ರಹಣೆ ಕಾರ್ಯ ನಡೆದಿದೆ.