ಶಿರಸಿ: ಮಾಜಿ ಅಬಕಾರಿ ಸಚಿವ ಪ್ರೇಮಾನಂದ ಜೈವಂತ(74) ಅನಾರೋಗ್ಯದಿಂದಾಗಿ ಇಂದು ನಿಧನರಾದರು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಶಿರಸಿ: ಮಾಜಿ ಸಚಿವ ಪಿ.ಎಸ್. ಜೈವಂತ್ ನಿಧನ - Former Minister of Excise PS Jaiwant
ಅನಾರೋಗ್ಯದ ಹಿನ್ನೆಲೆ ಮಾಜಿ ಸಚಿವ ಪ್ರೇಮಾನಂದ ಜೈವಂತ ಕೊನೆಯುಸಿರೆಳೆದಿದ್ದಾರೆ. ಅವರು, ಮೊದಲ ಅವಧಿಯಲ್ಲಿಯೇ ಜೆ. ಹೆಚ್. ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. ಜೈವಂತರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
ಶಿರಸಿ: ಮಾಜಿ ಸಚಿವ ಪಿ. ಎಸ್. ಜೈವಂತ್ ನಿಧನ
1994ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಅವರು, ಮೊದಲ ಅವಧಿಯಲ್ಲಿಯೇ ಜೆ. ಹೆಚ್. ಪಟೇಲರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದರು. 1999ರಲ್ಲಿ ವಿವೇಕಾನಂದ ವೈದ್ಯರ ಎದುರು ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಪುತ್ರಿಯನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಜೈವಂತರ ನಿಧನಕ್ಕೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.