ಕರ್ನಾಟಕ

karnataka

ETV Bharat / state

ಎಫ್​ಬಿಯಲ್ಲಿ ಪೋಲ್​... ಕೈಗೆ ಕೋಲು ಕೊಟ್ಟು ಹೊಡಿಸಿಕೊಂಡಿತಾ ಶಿರಸಿ ಕಾಂಗ್ರೆಸ್​! - ananthkumar hegde

ಫೇಸ್ಬುಕ್​ನ 'ಬ್ಲಾಕ್ ಕಾಂಗ್ರೆಸ್ ಶಿರಸಿ ಪೇಜ್' ನಲ್ಲಿ ಮುಂದಿನ ಸಂಸದರನ್ನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪೋಲ್. ಕಾಂಗ್ರೆಸ್ ಪೋಲ್ ಪ್ರಶ್ನೆಗೆ ಶೇ. 70 ರಷ್ಟು ಜನರಿಂದ ಅನಂತಕುಮಾರ್ ಹೆಗಡೆ ಹೆಸರು ಆಯ್ಕೆ.

ಶಿರಸಿ ಕಾಂಗ್ರೆಸ್

By

Published : Mar 29, 2019, 3:24 PM IST

ಶಿರಸಿ:ಕೈಗೆ ಕೋಲು ಕೊಟ್ಟು ಹೊಡಿಸಿಕೊಂಡಂತೆ ಎಂಬ ಗಾದೆಯೊಂದು ಶಿರಸಿ ಬ್ಲಾಕ್ ಕಾಂಗ್ರೆಸ್ ಪಾಲಿಗೆ ನಿಜವಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಮುಂದಿನ ಸಂಸದರು ಯಾರಾಗಬೇಕೆಂಬ ಪ್ರಶ್ನೆಯನ್ನಿಟ್ಟು ತೀವ್ರ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್ ತನ್ನ ಫೇಸ್​ಬುಕ್​ನ 'ಬ್ಲಾಕ್ ಕಾಂಗ್ರೆಸ್ ಶಿರಸಿ ಪೇಜ್' ನಲ್ಲಿ ಮುಂದಿನ ಸಂಸದರನ್ನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪೋಲ್ ಪ್ರಶ್ನೆಯೊಂದಿಗೆ ಆನಂದ ಅಸ್ನೋಟಿಕರ್ ಹಾಗೂ ಹಾಲಿ ಸಂಸದ ಬಿಜೆಪಿಯ ಅನಂತಕುಮಾರ್ ಹೆಗಡೆಯವರನ್ನು ಆಯ್ಕೆಗೆ ಹೆಸರಿಸಿತ್ತು.

ಆ ಪೇಜ್ ನಲ್ಲಿ ಇದುವರೆಗೆ ಸುಮಾರು 11000 ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಶೇ. 70 ರಷ್ಟು ಜನರು ಅನಂತಕುಮಾರ್ ಹೆಗಡೆ ಹೆಸರನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ತನ್ನದೇ ಪೇಜ್​ನಲ್ಲಿ ಮೈತ್ರಿ ಅಭ್ಯರ್ಥಿಯ 30 ಶೇ. ಆಯ್ಕೆಯನ್ನು ನೋಡಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ABOUT THE AUTHOR

...view details