ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿ ಗ್ರಾಮದೊಳಗೆ ಲಗ್ಗೆಯಿಟ್ಟ ಆನೆಗಳ ಹಿಂಡು: ಜನರಲ್ಲಿ ಆತಂಕ - Sirisi Elephant came to the Village

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ  ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನಿನಲ್ಲಿ ಪುಂಡಾಟ ತೋರಿಸಿ ಪಕ್ಕದ ಕಾಡಿಗೆ ಸಾಗಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿಗೆ ನುಗ್ಗಿದ್ದು ಕೃಷಿಗೆ ಹಾನಿಯಾಗಿದೆ.

ಗ್ರಾಮದೊಳಗೆ ಲಗ್ಗೆಯಿಟ್ಟ ಆನೆಗಳ ಹಿಂಡು

By

Published : Nov 7, 2019, 9:52 PM IST

ಶಿರಸಿ :ತಾಲೂಕಿನ ಬದನಗೋಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಹೊಲದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನಿನಲ್ಲಿ ಪುಂಡಾಟ ತೋರಿದ್ದು ಪಕ್ಕದ ಕಾಡಿಗೆ ತೆರಳಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿವೆ.

ಮೂರು ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಇರುವ ಹಿಂಡು ಕಾಣಿಸಿಕೊಂಡಿದ್ದು, ಜನರು ಭಯಬೀತರಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details