ಶಿರಸಿ:ಯಾವ ಖಾಸಗಿ ಆಸ್ಪತ್ರೆಗೂ ತಾವು ಕಡಿಮೆಯಿಲ್ಲ ಎಂಬುದನ್ನು ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕಿಡ್ನಿಯಲ್ಲಿ ದುರ್ಮಾಂಸ ಬೆಳೆದು ಅತಿಯಾದ ನರಕಯಾತನೆ ಅನುಭವಿಸುತ್ತಿದ್ದ ಮಹಿಳೆಯೋರ್ವಳ ಕಿಡ್ನಿಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಹಿಳೆಗೆ ಉಚಿತವಾಗಿ ಕಿಡ್ನಿ ಶಸ್ತ್ರ ಚಿಕಿತ್ಸೆ ಮಾಡಿ ಸೈ ಎನಿಸಿಕೊಂಡ ಸರ್ಕಾರಿ ಆಸ್ಪತ್ರೆ ವೈದ್ಯರು
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲದ ಕೊರತೆಯ ನಡುವೆಯೂ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಕಿಡ್ನಿಯಲ್ಲಿ ದುರ್ಮಾಂಸ ಬೆಳೆದು ಅತಿಯಾದ ನರಕಯಾತನೆ ಅನುಭವಿಸುತ್ತಿದ್ದ ಮಹಿಳೆಯೋರ್ವಳ ಕಿಡ್ನಿಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ
ಶಿರಸಿಯ ಮಹಿಳೆಯೋರ್ವರ ಕಿಡ್ನಿಯಲ್ಲಿ ಕಲ್ಲಾಗಿ ಕ್ರಮೇಣ ದುರ್ಮಾಂಸ ಬೆಳೆದು ಯಾತನೆ ಅನುಭವಿಸುತ್ತಿದ್ದರು. ಆ ಮಹಿಳೆ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಜಾನನ ಭಟ್ಟ ಪರೀಕ್ಷಿಸಿದಾಗ ದುರ್ಮಾಂಸ ಬೆಳೆದಿದ್ದು, ಕಂಡು ಬಂದು ನಂತರ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿ ಸತತ ಮೂರು ಗಂಟೆಗಳ ಕಾಲ ಪ್ರಯತ್ನಿಸಿ ಕಿಡ್ನಿಯಲ್ಲಿದ್ದ ಒಂದುವರೆ ಕೆಜಿಗೂ ಅಧಿಕ ದುರ್ಮಾಂಸದೊಂದಿಗೆ ಕಿಡ್ನಿ ತೆಗೆದು ಮಹಿಳೆಯ ಯಾತನೆ ನಿವಾರಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಾದರೆ 1.50 ರಿಂದ 2 ಲಕ್ಷ ರೂ ತಗಲುತ್ತಿದ್ದ ಈ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರು ಉಚಿತವಾಗಿ ಮಾಡುವ ಮೂಲಕ ಮಾನವೀಯತೆಯ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿಲ್ಲದ ಕೊರತೆಯ ನಡುವೆಯೂ ಸ್ಥಳೀಯ ಮಹಿಳೆಗೆ ಆಪರೇಷನ್ ಮಾಡಿ ಮರುಜೀವ ನೀಡಿದ್ದು, ಆಕೆ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾಳೆ. ಸರ್ಕಾರಿ ಆಸ್ಪತ್ರೆಗಳೆಂದರೇ ಮೂಗು ಮುರಿಯುತ್ತಿರುವ ಸನ್ನಿವೇಶದ ನಡುವೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಈ ರೀತಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಸರ್ಕಾರಿ ಆಸ್ಪತ್ರೆಯ ಮೇಲೆ ನಂಬಿಕೆ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.