ಶಿರಸಿ/ಕುಮಟಾ:ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಅಲ್ಮೇರಾದಿಂದ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕುಮಟಾ ಪಟ್ಟಣದ ಗಾಂಧಿ ನಗರದಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳನ ಕೈಚಳಕ... 9.81 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನ - ಮನೆಯಲ್ಲಿ ಕಳ್ಳತನ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪರಿಚಿತ ವ್ಯಕ್ತಿಗಳು ಕೆಲ ಆಯುಧಗಳಿಂದ ಮನೆ ಬಾಗಿಲನ್ನು ಒಡೆದು, ಒಳಗಡೆ ಪ್ರವೇಶಿಸಿ ಅಂದಾಜು 9.81 ಲಕ್ಷ ರೂ. ಮೌಲ್ಯದ ವಿವಿಧ 22 ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ.
ಮನೆಯಲ್ಲಿ ಕಳ್ಳತನ
ಪಟ್ಟಣದ ಗಾಂಧಿನಗರದ ನಿವಾಸಿ ನಿವೃತ್ತ ಬ್ಯಾಂಕ್ ಅಧಿಕಾರಿ ಗಜಾನನ ಗೋಪಾಲಕೃಷ್ಣ ಗೌರಯ್ಯ ಮನೆಯಲ್ಲಿ ಕಳ್ಳತನ ನಡೆದಿದೆ. ಜ.1 ರಿಂದ ಜ.2 ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಯಾರೋ ಅಪರಿಚಿತ ವ್ಯಕ್ತಿಗಳು ಕೆಲ ಆಯುಧಗಳಿಂದ ಮನೆಯ ಬಾಗಿಲನ್ನು ಒಡೆದು, ಒಳಗಡೆ ಪ್ರವೇಶಿಸಿ, ಅಲ್ಮೇರಾ ಬಾಗಿಲನ್ನು ಮುರಿದು, ಅಂದಾಜು 9.81 ಲಕ್ಷ ರೂ. ಮೌಲ್ಯದ ವಿವಿಧ 22 ಬಂಗಾರದ ಆಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.