ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಸೆಲ್ಯುಲರ್ ಜೈಲಿಗೆ ಹೋಗಿ ವಾಸ್ತವ ಅರಿಯಲಿ: ಸಿ.ಟಿ ರವಿ ಸಿಡಿಮಿಡಿ - ಸಾವರ್ಕರ್​ ವಿವಾದಕ್ಕೆ ಕಾರವಾರದಲ್ಲಿ ಸಿ.ಟಿ ರವಿ ಪ್ರತಿಕ್ರಿಯೆ

ಸಿದ್ದರಾಮಯ್ಯ ಸೆಲ್ಯುಲರ್​ ಜೈಲಿಗೆ ಹೋಗಿ ವಾಸ್ತವ ಇತಿಹಾಸ ತಿಳಿಯಲಿ ಎಂದು ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ

ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ ರವಿ ಪ್ರತಿಕ್ರಿಯೆ

By

Published : Oct 19, 2019, 12:31 PM IST

ಕಾರವಾರ:ವೀರ ಸಾವರ್ಕರ್ ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕೆ 48 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರೆ ಅವರಿಗೂ ಸತ್ಕಾರ ಮಾಡುತ್ತಿದ್ದರು. ಸಾವರ್ಕರ್ ಬಗ್ಗೆ ಅಪಮಾನ ಮಾಡುವುದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಸಿಡಿಮಿಡಿಗೊಂಡರು.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ವೀರ ಸಾವರ್ಕರ್​​ಗೆ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ 'ಭಾರತ ರತ್ನ' ನೀಡುವ ವಿವಾದದ ಕುರಿತು ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕೆ ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ನೀಡಿ ಜೈಲಿಗೆ ಕಳುಹಿಸಿದ್ದರು. ಆದರೆ ಇಂತವರ ವಿರುದ್ಧ ಆರೋಪ ಮಾಡುವ ಸಿದ್ದರಾಮಯ್ಯನವರಿಗೆ ಖರ್ಚಿಗೆ ಹಣ ಕೊಡ್ತೇವೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿರುವ ಸೆಲ್ಯುಲರ್ ಜೈಲಿಗೆ ಹೋಗಿ ಇತಿಹಾಸದ ವಾಸ್ತವಿಕ ಸ್ಥಿತಿ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ ರವಿ ಪ್ರತಿಕ್ರಿಯೆ

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು ಮಾತ್ರ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಎಂದು ಇತಿಹಾಸವನ್ನು ಅರ್ಧ ತೋರಿಸುವ ಪ್ರಯತ್ನ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವ ಕೆಲಸ ಹಲವರು ಮಾಡಿದ್ದರು. ಆದ್ರೆ, ಅವರನ್ನು ಮರೆ ಮಾಚುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.

ವೀರ ಸಾವರ್ಕರ್​​ಗೆ ಯಾವತ್ತೋ ಭಾರತ ರತ್ನ ಸಿಗಬೇಕಿತ್ತು. ಆ ಅನ್ಯಾಯವನ್ನು ಸರಿಪಡಿಸುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಾರೆ ಎಂದು ಹೇಳಿದರು. ದೇಶದ ವಿರುದ್ಧ ಮಾತನಾಡುವ ಟುಕುಡೆ ಗ್ಯಾಂಗ್​​​ನವರಿಗೆ ನಾವು ಬೆಂಬಲ ಕೊಟ್ಟಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾಶ್ಮೀರ ಪ್ರತ್ಯೇಕ ಮಾಡಬೇಕು ಅಂತ ಬಯಸುವವರಿಗೆ ಬೆಂಬಲ ಮಾಡುವ ಕೆಲಸ ಮಾಡುತ್ತಿತ್ತು. ನಾವು ಅಂತಹ ಕೆಲಸ ಮಾಡಿಲ್ಲ ಯೋಗ್ಯರ ನೇಮಕ ಮಾಡಿದ್ದೇವೆ ಎಂದು ಹೇಳಿದರು.

ಸಾವರ್ಕರ್​ಗೆ ಭಾರತರತ್ನ ನೀಡುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು,ಸಾವರ್ಕರ್‌ಗೆ ಭಾರತ ರತ್ನ ಕೊಡುವುದಾದರೆ ನಾಥುರಾಮ್​ ಗೂಡ್ಸೆಗೂ ಕೊಡಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ರು.

ABOUT THE AUTHOR

...view details