ಶಿರಸಿ:ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಖಾಲಿ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್ನಲ್ಲಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್ನಲ್ಲಿದ್ದಾರೆ.. ಅನಂತಕುಮಾರ್ ಹೆಗಡೆ - Ananthakumara Hegde
ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಖಾಲಿ ಮಾಡಬೇಕು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್ನಲ್ಲಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
ಸಂಸದ ಅನಂತಕುಮಾರ ಹೆಗಡೆ
ಯಲ್ಲಾಪುರ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷವನ್ನ ಭಾರತದಿಂದ ಹೊರಗಟ್ಟಬೇಕು. ಇಲ್ಲಿ ಬಿಜೆಪಿಯವರು ಇದ್ದಷ್ಟೇ.. ಕಾಂಗ್ರೆಸ್ನವರು ಇದ್ದಾರೆ. ಇದು ರಾಜಕಾರಣ. ಕಾಂಗ್ರೆಸ್ನ ಸಂಪೂರ್ಣ ನಾಶ ಮಾಡಬೇಕು ಎಂದರು.
ಇನ್ನು,ಶಿವರಾಂ ಹೆಬ್ಬಾರ್ ಬಿಜೆಪಿಗೆ ಹೊಸಬರಲ್ಲ. ಬಿಜೆಪಿಯಿಂದಲೇ ಕಾಂಗ್ರೆಸ್ಗೆ ಹೋದವರು. ಈಗ ಪುನಾ ಬಿಜೆಪಿಗೆ ವಾಪಸಾಗಿದಾರೆ. ಇನ್ನೂ ಅನೇಕರು ಬಿಜೆಪಿಗೆ ಬರಲಿದ್ದಾರೆ ಎಂದರು.