ಶಿರಸಿ: ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಬಿಡುವಾಗ ಚೂರಿ ಹಾಕಿದ್ದರೋ ಅಥವಾ ಪೇಡ ಕೊಟ್ಟು ಹೊರ ಬಂದಿದ್ದರೋ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ: ಶಿವರಾಮ್ ಹೆಬ್ಬಾರ್ - ಶಿರಸಿಯಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿಕೆ
ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಬಿಡುವಾಗ ಚೂರಿ ಹಾಕಿದ್ದರೋ ಅಥವಾ ಪೇಡ ಕೊಟ್ಟು ಹೊರ ಬಂದಿದ್ದರೋ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪ್ರಶ್ನಿಸಿದ್ದಾರೆ.
ಶಿವರಾಮ್ ಹೆಬ್ಬಾರ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ್ ಹೆಬ್ಬಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ನಲ್ಲಿ ಉಪ ಮುಖ್ಯಮಂತ್ರಿ ಆಗಿದ್ದವರು. ಆದರೆ ಅವರು ಪಕ್ಷ ಬಿಟ್ಟು ಬಂದರು. ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.
ಸಿದ್ದರಾಮಯ್ಯನವರ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಅವರು ಮಾತನಾಡುವಾಗ ಉಪಯೋಗಿಸಿರುವ ಭಾಷೆ ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ ಎಂದರು.