ಕರ್ನಾಟಕ

karnataka

ETV Bharat / state

ಮುರ್ಡೇಶ್ವರದಲ್ಲಿ ಶಿವರಾತ್ರಿ ಆಚರಣೆ: ದೇವರ ದರ್ಶನ ಪಡೆದು ಭಕ್ತರು ಕೃತಾರ್ಥ - ಮುರ್ಡೇಶ್ವರದಲ್ಲಿ ವಿಶೇಷ ಪೂಜೆ

ಮಹಾಶಿವರಾತ್ರಿ ಅಂಗವಾಗಿ ಮುರ್ಡೇಶ್ವರದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

murudeshwar shiva temple
ಮುರ್ಡೇಶ್ವರದಲ್ಲಿ ಶಿವರಾತ್ರಿ

By

Published : Feb 22, 2020, 8:27 AM IST

ಭಟ್ಕಳ/ಉತ್ತರ ಕನ್ನಡ:ಮಹಾಶಿವರಾತ್ರಿ ಅಂಗವಾಗಿ ಮುರ್ಡೇಶ್ವರಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.

ಮುರ್ಡೇಶ್ವರದಲ್ಲಿ ಶಿವರಾತ್ರಿ

ಮುರ್ಡೇಶ್ವರದಲ್ಲಿ ಶಿವ ದರ್ಶನಕ್ಕಾಗಿ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಪರಶಿವನಿಗೆ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಮುಂತಾದ ವಿಶೇಷ ಧಾರ್ಮಿಕ ಕಾರ್ಯಗಳು ನಡೆದವು. ರಾಜ್ಯದ ನಾನಾ ಮೂಲೆಗಳಿಂದ ಬಂದಿದ್ದ ಭಕ್ತರಿಗೆ ಪಾನೀಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ತಾಲೂಕಿನ‌ ವಿವಿಧೆಡೆ ಶಿವರಾತ್ರಿ ಸಂಭ್ರಮ:

ತಾಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಚೋಳೇಶ್ವರ, ಬಂದರ್‌ನ ಕುಟುಮೇಶ್ವರ, ಮಾರುಕೇರಿಯಲ್ಲಿರುವ ಈಶ್ವರ ದೇವಸ್ಥಾನ, ಸೋನಾರಕೇರಿಯಲ್ಲಿ ಇರುವ ವಿರೂಪಾಕ್ಷ ದೇವಸ್ಥಾನಗಳಿಗೆ ಸ್ಥಳೀಯ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಂಜೆಯ ವೇಳೆಗೆ ಮುರ್ಡೇಶ್ವರದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಭಕ್ತರ ಪೂಜೆಗೆ ಅನುಕೂಲವಾಗುವಂತೆ ದೇವಸ್ಥಾನದಲ್ಲಿ ಸಿಬ್ಬಂದಿ ಹಾಗೂ ಉಪಾಧಿವಂತರು ಸಹಕರಿಸಿದರು. ಪೊಲೀಸ್ ಬಂದೋಬಸ್ತ್‌ ಸಹ ಏರ್ಪಡಿಸಲಾಗಿತ್ತು.

ದೇವಾಲಯದ ಇತಿಹಾಸ:

ಲಂಕಾಧಿಪತಿ ರಾವಣನ ತಾಯಿ ಮರಳಿನ ಲಿಂಗ ತಯಾರಿಸಿ ಪೂಜಿಸಬೇಕೆನ್ನುವಷ್ಟರಲ್ಲಿ ಅಲೆಯೊಂದು ಲಿಂಗವನ್ನು ಕೊಚ್ಚಿಕೊಂಡು ಹೋಯಿತು. ಇದರಿಂದ ವ್ರತನಿರಶನಳಾಗಿ ಕುಳಿತ ತನ್ನ ತಾಯಿಯ ಸಲುವಾಗಿ ರಾವಣನು ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗ ಪಡೆದು ಹಿಂತಿರುಗುತ್ತಿದ್ದಾಗ, ಮಹಾವಿಷ್ಣು ತನ್ನ ಚಕ್ರದಿಂದ ಸೂರ್ಯನನ್ನು ಮರೆಯಾಗಿಸಿ ಸಂಜೆಯಾಗಿಸಿದ. ಬಲು ಕರ್ಮಠನಾದ ರಾವಣನು ಕೈಯಲ್ಲಿದ್ದ ಆತ್ಮಲಿಂಗವನ್ನು ಹತ್ತಿರದಲ್ಲೇ ವಟುವಿನ ರೂಪದಲ್ಲಿದ್ದ ಗಣಪನ ಕೈಯಲ್ಲಿಟ್ಟನು. ಸಂಧ್ಯಾವಂದನೆಗೆ ಮರಳುವ ಮುನ್ನವೇ ಗಣಪನು ಲಿಂಗವನ್ನು ಭೂಮಿಯಲ್ಲಿ ಪ್ರತಿಷ್ಠಾಪಿಸಿದನು.ಅದು ಈಗ ಭೂಕೈಲಾಸವೆಂದು ಪ್ರತೀತಿಯಾದ ಗೋಕರ್ಣ ಕ್ಷೇತ್ರ. ಭೂಮಿ ಮೇಲೆ ಲಿಂಗ ಪ್ರತಿಷ್ಠಾಪಿಸಿದ್ದರಿಂದ ಕೋಪಗೊಂಡು ರಾವಣನು ಲಿಂಗವನ್ನು ಕಿತ್ತು ಎಸೆದಾಗ ಅದು ಶಿವನ ಪಂಚಕ್ಷೇತ್ರ (ಗೋಕರ್ಣೇಶ್ವರ, ಸಜ್ಜೇಶ್ವರ, ಧಾರೇಶ್ವರ, ಗುಣವಂತೇಶ್ವರ, ಮುರ್ಡೇಶ್ವರ) ಗಳಾಗಿ ಪ್ರಸಿದ್ಧಿಯಾಯಿತು. ಮುರುಡು ಮುರುಡಾಗಿ ಬಂದು ಬಿದ್ದ ಶಿವನ ಲಿಂಗದಿಂದಾಗಿ ಭಟ್ಕಳ ತಾಲೂಕಿನಲ್ಲಿರುವ ಈ ಕ್ಷೇತ್ರ ಮುರ್ಡೇಶ್ವರ ಎಂದು ಪ್ರಸಿದ್ಧಿಯಾಯಿತು ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details