ಶಿರಸಿ (ಉತ್ತರಕನ್ನಡ): ಕೆನರಾ ಡಿಸಿಸಿ ಬ್ಯಾಂಕ್ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಗೆ ನಡೆಯಲ್ಲಿದ್ದು, ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮತದಾರ ಕ್ಷೇತ್ರದಿಂದ ಯಲ್ಲಾಪುರ ತಾಲೂಕು ಪ್ರತಿನಿಧಿಯಾಗಿ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಕೆಡಿಸಿಸಿ ಬ್ಯಾಂಕ್ ಚುನಾವಣೆ: ಸಚಿವ ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಕೆ - ಉತ್ತರಕನ್ನಡ ಲೇಟೆಸ್ಟ್ ನ್ಯೂಸ್
ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಮತದಾರ ಕ್ಷೇತ್ರದಿಂದ ಯಲ್ಲಾಪುರ ತಾಲೂಕು ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಸಿದ್ದಾರೆ.
ಶಿರಸಿಯ ಪ್ರಧಾನ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಹೆಬ್ಬಾರ್, ಚುನಾವಣಾ ಕಾರ್ಯಾಲಯಕ್ಕೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೇರೆ-ಬೇರೆ ಪಕ್ಷಗಳಲ್ಲಿ ಇದ್ದಾಗಲೂ ಹಲವು ಬಾರಿ ನಿರ್ದೇಶಕನಾಗಿ ಆಯ್ಕೆ ಆಗಿದ್ದೇನೆ. ಆದರೆ, ಯಾವಾಗಲೂ ರಾಜಕೀಯ ವ್ಯಕ್ತಿಯಾಗಿ ಬ್ಯಾಂಕಿಗೆ ಬಂದಿಲ್ಲ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ಎಂದಿಗೂ ರಾಜಕೀಯ ಬರಬಾರದು. ಬೇರೆ-ಬೇರೆ ರಾಜಕೀಯ ಪಕ್ಷದ ಪ್ರಮುಖರು ಸಹಕಾರಿ ಕ್ಷೇತ್ರಕ್ಕೆ ಬರಲು ಹುಮ್ಮಸ್ಸು ತೋರಿಸಬೇಕು. ಆದರೆ, ಗೆದ್ದ ನಂತರದಲ್ಲಿ ರಾಜಕೀಯ ಮಾಡಬಾರದು. ಬ್ಯಾಂಕಿನ ಅಭಿವೃದ್ಧಿಗೆ, ರೈತರ, ಠೇವಣಿದಾರರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.