ಶಿರಸಿ:ಮನೆಯನ್ನೇ ಕಾಂಗ್ರೆಸ್ ಕಚೇರಿ ಮಾಡಿಕೊಂಡು ಎರಡು ಬಾರಿ ಕಾಂಗ್ರೆಸ್ನಿಂದ ವಿಜಯ ಸಾಧಿಸಿದ್ದ ಶಿವರಾಮ್ ಹೆಬ್ಬಾರ್ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು, ಈಗ ಅವರ ಮನೆ ಬಿಜೆಪಿ ಕಚೇರಿಯಾಗಿ ಬದಲಾಗಿದೆ.
ಕಾಂಗ್ರೆಸ್ ಕಚೇರಿಯಾಗಿದ್ದ ಹೆಬ್ಬಾರ್ ಮನೆ ಈಗ ಬಿಜೆಪಿ ಆಫೀಸ್... 2ನೇ ಮಹಡಿಯಲ್ಲಿ ಅರಳಿದ ಕಮಲ - ಶಿವರಾಮ್ ಹೆಬ್ಬಾರ್ ನ್ಯೂಸ್
ಮನೆಯನ್ನೇ ಕಾಂಗ್ರೆಸ್ ಕಚೇರಿ ಮಾಡಿಕೊಂಡು ಎರಡು ಬಾರಿ ಕಾಂಗ್ರೆಸ್ನಿಂದ ವಿಜಯ ಸಾಧಿಸಿದ್ದ ಶಿವರಾಮ್ ಹೆಬ್ಬಾರ್ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು, ತಮ್ಮ ಮನೆಯನ್ನೆ ಕಚೇರಿಯಾಗಿ ಮಾಡಿಕೊಂಡಿದ್ದು, ಇದಕ್ಕೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಹೆಬ್ಬಾರ್ ಮನೆ ಈಗ ಬಿಜೆಪಿ ಕಚೇರಿಯಾಗಿ ಮಾರ್ಪಟ್ಟಿದೆ. ಬಿಜೆಪಿ ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಬಿಜೆಪಿ ಕಚೇರಿಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ್ದಾರೆ. ಆರ್.ವಿ.ದೇಶಪಾಂಡೆ, ಮಾರ್ಗರೇಟ್ ಆಳ್ವಾ ಅವರ ಫೋಟೋ ಇದ್ದ ಕಚೇರಿಯಲ್ಲಿ ಈಗ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ ದಯಾಳ ಉಪಾಧ್ಯಾಯ ಅವರ ಭಾವಚಿತ್ರ ಕಾಣಿಸಿಕೊಂಡಿದೆ.
ಹೆಬ್ಬಾರ್ ಮನೆಯ ಎರಡನೇ ಮಹಡಿಯಲ್ಲಿರುವ ಬಿಜೆಪಿ ಕಚೇರಿ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಕಚೇರಿಯಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹೆಬ್ಬಾರ್ ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಕಾರಣ ಯಲ್ಲಾಪುರ ತಾಲೂಕಾ ಬಿಜೆಪಿ ಕಚೇರಿಯನ್ನು ಮಾಡಲಾಗಿದೆ. ಹೆಬ್ಬಾರರ ಮನೆಯಲ್ಲೇ ಬಿಜೆಪಿ ಕಚೇರಿ ಮುಂದುವರುವುದಕ್ಕೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.