ಕರ್ನಾಟಕ

karnataka

ETV Bharat / state

ರಾಜಕಾರಣದಲ್ಲಿ ಆಸೆಗೆ ಒಂದು ಮಿತಿ ಇರಬೇಕು: ಶಿವರಾಮ್​ ಹೆಬ್ಬಾರ್​ - ರಾಜಕಾರಣದಲ್ಲಿ ಆಸೆಗೆ ಒಂದು ಮೀತಿಯಿರಬೇಕು:ಶಿವರಾಮ ಹೆಬ್ಬಾರ್

ರಾಜಕಾರಣದಲ್ಲಿ ಆಸೆಗೆ ಒಂದು ಮಿತಿ ಇರಬೇಕು. ಕಾರ್ಯಕರ್ತರಿದ್ದಾಗ ಶಾಸಕಾರಬೇಕು, ಶಾಸಕರಾದ ಮೇಲೆ ಸಚಿವರಾಗಬೇಕು, ಸಚಿವರಾದ ಮೇಲೆ ಉತ್ತಮ ಖಾತೆ ಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿ ಈಡೇರಿಸಲು ಸಾಧ್ಯವಿಲ್ಲ ಎಂದು ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್ ಹೇಳಿದ್ದಾರೆ.

Shivaram Hebbar
ಶಿವರಾಮ ಹೆಬ್ಬಾರ್

By

Published : Jan 10, 2020, 2:55 PM IST

ಶಿರಸಿ: ನಾವು ಸಚಿವರಾಗುವುದು ವಿಳಂಬ ಆಗಿರುವುದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದು ಯಾವುದೇ ತಪ್ಪಿಲ್ಲ.‌ ಬದಲಾಗಿ ನಮ್ಮ ಸಮಯ ಸರಿಯಿಲ್ಲದೇ ತಡವಾಗುತ್ತಿದೆ ಎಂದು ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.

ರಾಜಕಾರಣದಲ್ಲಿ ಆಸೆಗೆ ಒಂದು ಮಿತಿ ಇರಬೇಕು: ಶಿವರಾಮ್​ ಹೆಬ್ಬಾರ್

ತಾಲೂಕಿನ ಬಿಸ್ಲಕೊಪ್ಪ ಗ್ರಾಮ ಪಂಚಾಯತ್​ ವ್ಯಾಪ್ತಿಯ ಎಕ್ಕಂಬಿಯಲ್ಲಿ ಕುಡಿಯುವ ನೀರಿನ ಟ್ಯಾಂಕಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಈಟಿವಿ ಭಾರತನೊಂದಿಗೆ ಮಾತನಾಡಿದರು. ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ತಿಂಗಳ 17 ಅಥವಾ 18 ರಂದು ಆಗಬಹುದು. ಈ ಕುರಿತು ಸಿಎಂ ಯಡಿಯೂರಪ್ಪ ಮಾಧ್ಯಮಗಳ ಮೂಲಕವೇ ತಿಳಿಸಿದ್ದಾರೆ ಎಂದರು.‌

ರಾಜಕಾರಣದಲ್ಲಿ ಆಸೆಗೆ ಒಂದು ಮಿತಿ ಇರಬೇಕು. ಕಾರ್ಯಕರ್ತರಿದ್ದಾಗ ಶಾಸಕಾರಬೇಕು, ಶಾಸಕರಾದ ಮೇಲೆ ಸಚಿವರಾಗಬೇಕು, ಸಚಿವರಾದ ಮೇಲೆ ಉತ್ತಮ ಖಾತೆ ಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಈಡೇರಿಸಲು ಸಾಧ್ಯವಿಲ್ಲ. ನಮ್ಮ ಶಕ್ತಿ ಸಾಮರ್ಥ್ಯ ನೋಡಿ ಸೂಕ್ತ ಸ್ಥಾನಮಾನ ನೀಡುತ್ತಾರೆ ಎಂದು ಹೆಬ್ಬಾರ್​ ವಿಶ್ವಾಸ ವ್ಯಕ್ತಪಡಿಸಿದರು. ‌

ABOUT THE AUTHOR

...view details