ಶಿರಸಿ: ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೊವಿಡ್-19 ಟಾಸ್ಕ್ ಫೋರ್ಸ್ ರಚನೆ ಮಾಡಿಕೊಂಡು ಆಹಾರ ಪದಾರ್ಥಗಳನ್ನು ಬಡವರ ಮನೆಗಳಿಗೆ ತೆರಳಿ ವಿತರಿಸಲಾಗುತ್ತಿದೆ.
ಶಿರಸಿ: ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ - food kits distribute
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೋವಿಡ್-19 ಟಾಸ್ಕ್ ಫೋರ್ಸ್ ರಚನೆ ಮಾಡಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ 3 ಹಂತದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ.
ಲಾಕ್ಡೌನ್ ಆದ ಪರಿಣಾಮ ಹಲವು ಬಡ ಕುಟುಂಬಗಳು ಊಟಕ್ಕೂ ಪರದಾಡುವಂತಾಗಿದೆ. ಇದರಿಂದ ಅನೇಕ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಜನರ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಸಹ ಇವರ ಜೊತೆ ಸೇರಿಕೊಂಡಿದೆ. ಒಟ್ಟು 3 ಹಂತದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರಿಗೆ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ. ಬಡವರ ಮನೆ ಮನೆಗೆ ತೆರಳಿ ಮೊದಲನೇ ಹಂತದಲ್ಲಿ 250 ಕಿಟ್ಗಳನ್ನು ಹಂಚಲಾಗಿದ್ದು, ಎರಡನೇ ಹಂತದಲ್ಲಿ 400 ಕಿಟ್ ನೀಡಲಾಗಿದೆ. ಮೂರನೇ ಹಂತದಲ್ಲಿ 450ಕ್ಕೂ ಅಧಿಕ ಕಿಟ್ ತಯಾರು ಮಾಡಲಾಗಿದ್ದು, ಎರಡು ದಿನಗಳಿಂದ ಹಂಚಿಕೆ ಕಾರ್ಯ ಭರದಿಂದ ಸಾಗಿದೆ.
ಒಂದು ಕಿಟ್ ಸುಮಾರು 1200 ರೂ. ಬೆಲೆಯ ದಿನಸಿ ಪದಾರ್ಥ ಒಳಗೊಂಡಿದ್ದು, 10 ದಿನಕ್ಕೆ ಆಗಲಿದೆ. ಕಳೆದ 21 ದಿನಗಳಿಂದ ಬಡವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗುತ್ತಿದ್ದು, ಕಿಟ್ನಲ್ಲಿ ದಿನನಿತ್ಯ ಅಗತ್ಯವಿರುವ ಬೇಳೆ, ಕಾಳು, ಸಕ್ಕರೆ, ಚಾ ಪುಡಿ, ಸೋಪು ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಲಾಗುತ್ತಿದೆ. ಕೋವಿಡ್ ಸಮಸ್ಯೆ ಮುಗಿಯುವವರೆಗೆ ಇವರ ಸೇವೆ ಮುಂದುವರೆಯಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ತಿಳಿಸಿದ್ದಾರೆ.