ಕರ್ನಾಟಕ

karnataka

ETV Bharat / state

ವಿರೋಧಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ - ಮಾಜಿ ಶಾಸಕ ವಿ.ಎಸ್.ಪಾಟೀಲ್

ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆಗೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಲಿದ್ದು, ಬೃಹತ್ ಸಮಾವೇಶ ನಡೆಸಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ವಿರೋದಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ

By

Published : Nov 19, 2019, 3:35 AM IST

ಶಿರಸಿ: ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡು ಚುನಾವಣೆಗೆ ಧುಮುಕಿರುವ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಸೋಮವಾರ ನಾಮಪತ್ರ ಸಲ್ಲಿಲಿದ್ದು, ಬೃಹತ್ ಸಮಾವೇಶ ನಡೆಸಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಯಲ್ಲಾಪುರ ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ನಾಮಪತ್ರ ಸಲ್ಲಿಕೆಯ ಸಭೆಯನ್ನು ಹೆಬ್ಬಾರ್ ಆಯೋಜಿಸಿದ್ದು, 10 ಸಾವಿರಕ್ಕೂ ಅಧಿಕ ಬೆಂಬಲಿಗರು ಸಭೆಯಲ್ಲಿ ಪಾಲ್ಗೊಂಡು ಇವರ ಮೇಲಿನ ಅಭಿಮಾನ ಪ್ರದರ್ಶಿಸಿದ್ದಾರೆ.

ರಾಜ್ಯ ಬಿಜೆಪಿ ನಾಯಕರಾದ ನಳೀನ್ ಕುಮಾರ್ ಕಟೀಲ್, ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅನೇಕರು ಈ ವೇಳೆ ಬೆಂಬಲ ನೀಡಿದರು. ‌

ವಿರೋಧಿಗಳಿಗೆ ನಡುಕ ಹುಟ್ಟಿಸಿದ ಹೆಬ್ಬಾರ್ ಸಮಾವೇಶ

ಹಿರಿಯರ ನಿರ್ಧಾರದಂತೆ ಎಲ್ಲ ಒಂದಾಗಿ ಚುನಾವಣೆ ಎದುರಿಸಿ ಹೆಬ್ಬಾರರನ್ನು ಗೆಲ್ಲುಸುತ್ತೇವೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಇದೇ ವೇಳೆ ಹೇಳಿದರು. ಒಟ್ಟಾರೆಯಾಗಿ ನಾಮಪತ್ರ ಸಮಾವೇಶದಲ್ಲಿ ಹೆಬ್ಬಾರ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದು, ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಮಂಗಳವಾರದಿಂದ ಕ್ಷೇತ್ರದಾದ್ಯಂತ ಪ್ರಚಾರ ನಡೆಯಲಿದ್ದು, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

ABOUT THE AUTHOR

...view details