ಕರ್ನಾಟಕ

karnataka

ETV Bharat / state

ಅಚ್ಚರಿ..! ಕಾರವಾರ ಸಮುದ್ರದಲ್ಲಿ 4 ದಶಕದ ಹಿಂದೆ ಮುಳುಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ!!

ಸುಮಾರು 4 ದಶಕಗಳ ಹಿಂದೆ ಕಾರವಾರದ ಸಮುದ್ರ ಭಾಗದಲ್ಲಿ ಮುಳುಗಡೆಯಾಗಿದ್ದ ಸಿಂಗಾಪುರದ 'ಚೆರಿಮಾಜು' ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲ ತೀರದಲ್ಲಿ ಪತ್ತೆಯಾಗಿದೆ.

Ships remains found in  karwar beach
ಕಾರವಾರದ ಕಡಲ ತೀರದಲ್ಲಿ ಪತ್ತೆಯಾದ ಹಡಗಿನ ಅವಶೇಷ

By

Published : Jun 27, 2021, 7:43 AM IST

ಕಾರವಾರ: ಇಲ್ಲಿನ ಸಮುದ್ರ ಕಿನಾರೆಯಲ್ಲಿ ಅಚ್ಚರಿಯೊಂದು ಕಂಡುಬಂದಿದೆ. ಸುಮಾರು 4 ದಶಕಗಳ ಹಿಂದೆ ಸಿಂಗಾಪುರದಿಂದ ಕಾರವಾರ ಬಂದರಿಗೆ ಆಗಮಿಸುವಾಗ ಕಡಲಬ್ಬರಕ್ಕೆ ಸಿಕ್ಕಿ ಮುಳುಗಿದ್ದ ಸರಕು ಸಾಗಾಣಿಕೆ ಹಡಗಿನ ಅವಶೇಷಗಳು ಇಂದು ಕಾರವಾರದ ಕಡಲ ತೀರದಲ್ಲಿ ಪತ್ತೆಯಾಗಿವೆ.

ಕಾರವಾರದ ಕಡಲ ತೀರದಲ್ಲಿ ಪತ್ತೆಯಾದ ಹಡಗಿನ ಅವಶೇಷ

ಸಿಂಗಾಪುರದ 'ಚೆರಿಮಾಜು' ಎಂಬ ಹೆಸರಿನ ಸರಕು ಸಾಗಾಣಿಕೆ ಹಡಗು 1981ರಲ್ಲಿ ಸಿಂಗಾಪುರದಿಂದ ಕಾರವಾರದ ಬಂದರಿಗೆ ಸುಮಾರು 14,418 ಟನ್ ಡಾಂಬರ್ ಹೊತ್ತು ತರುವಾಗ ಕಡಲಬ್ಬರಕ್ಕೆ ಸಿಲುಕಿ ಸಂಪೂರ್ಣ ಮುಳುಗಡೆಯಾಗಿತ್ತು. ಈ ವೇಳೆ ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಣೆ ಮಾಡಲಾಗಿತ್ತು. 1981 ರಲ್ಲಿ ಕಾರವಾರದ ಸಮುದ್ರದಲ್ಲಿ ಹುದುಗಿ ಹೋಗಿದ್ದ ಸಿಂಗಾಪುರ ಮೂಲದ ಈ ಹಡಗನ್ನು ಮೇಲೆತ್ತಲು ಪ್ರಯತ್ನ ಮಾಡಲಾಗಿತ್ತಾದರೂ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ ಎನ್ನಲಾಗ್ತಿದೆ.

ಕಾರವಾರದ ಕಡಲ ತೀರದಲ್ಲಿ ಪತ್ತೆಯಾದ ಹಡಗಿನ ಅವಶೇಷ

ಹೀಗಾಗಿ ಕಂಪನಿ ಸಮುದ್ರಾಳದಲ್ಲೇ ಹಡಗಿನ ಅವಶೇಷಗಳನ್ನು ಕತ್ತರಿಸಿ ಹಡಗು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಅತೀ ಆಳ ಹಾಗೂ ಹೆಚ್ಚು ಮರಳು ತುಂಬಿದ್ದರಿಂದ ಅಲ್ಪ ಭಾಗವನ್ನಷ್ಟೇ ಮೇಲೆತ್ತಲಾಗಿತ್ತು. ಆದರೆ ಇದೀಗ ಅಲೆಯ ರಭಸಕ್ಕೆ ಸಿಕ್ಕ ಹಡಗಿನ ಅವಶೇಷ ತನ್ನಿಂದ ತಾನೇ ಮೇಲೆದ್ದು, ಬಂದಿರುವುದು ಸ್ಥಳೀಯ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಕಾರವಾರದ ಕಡಲ ತೀರದಲ್ಲಿ ಪತ್ತೆಯಾದ ಹಡಗಿನ ಅವಶೇಷ

ಇದನ್ನೂ ಓದಿ:ಇಂಡೆಕ್ಸ್ ಆ್ಯಪ್​​ ಅಭಿವೃದ್ಧಿ: ಬೆಂಗಳೂರಿಗೆ ಇನೋವೇಷನ್ ಪ್ರಶಸ್ತಿ

ABOUT THE AUTHOR

...view details