ಕಾರವಾರ: ಆಸ್ಪತ್ರೆಗಳಲ್ಲಿ ದಾಖಲಾಗಿರುವ ಅಸಹಾಯಕರು ಹಾಗೂ ಬುದ್ಧಿಮಾಂದ್ಯ ರೋಗಿಗಳಿಗೆ ಉಚಿತವಾಗಿ ಕ್ಷೌರ ಮಾಡಿಸುವ ಜತೆಗೆ ಹೊಸ ಬಟ್ಟೆ ನೀಡಿ ಸಂಘಟನೆಯೊಂದು ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಿಸಿದೆ.
ಬುದ್ಧಿಮಾಂದ್ಯರಿಗೆ ಕ್ಷೌರ, ಅಸಹಾಯಕರಿಗೆ ಬಟ್ಟೆ: ಮಹಾತ್ಮನ ಜಯಂತಿ ದಿನ ಮಾನವೀಯ ಕಾರ್ಯ - ಕಾರವಾರದ ಜನಶಕ್ತಿವೇದಿಕೆಯಿಂದ ಮಾನವೀಯ ಕಾರ್ಯ
ಆಸ್ಪತ್ರೆಗಳಲ್ಲಿರುವ ಅಸಹಾಯಕರು ಹಾಗೂ ಬುದ್ಧಿಮಾಂದ್ಯ ರೋಗಿಗಳಿಗೆ ಉಚಿತವಾಗಿ ಕ್ಷೌರ ಮಾಡಿಸುವ ಜತೆಗೆ ಹೊಸ ಬಟ್ಟೆ ನೀಡಿ ಸಂಘಟನೆಯೊಂದು ವಿಶಿಷ್ಟವಾಗಿ ಗಾಂಧಿ ಜಯಂತಿ ಆಚರಿಸಿದೆ.
![ಬುದ್ಧಿಮಾಂದ್ಯರಿಗೆ ಕ್ಷೌರ, ಅಸಹಾಯಕರಿಗೆ ಬಟ್ಟೆ: ಮಹಾತ್ಮನ ಜಯಂತಿ ದಿನ ಮಾನವೀಯ ಕಾರ್ಯ](https://etvbharatimages.akamaized.net/etvbharat/prod-images/768-512-4627155-thumbnail-3x2-surya.jpg)
ಕಾರವಾರದ ಜನಶಕ್ತಿ ವೇದಿಕೆ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆಯಲ್ಲಿ ಹೇರ್ ಕಟಿಂಗ್, ಶೇವಿಂಗ್ ಮಾಡದೆ ಇದ್ದ ಜನರನ್ನು ಹುಡುಕಿ ಅಂತವರಿಗೆ ಆಸ್ಪತ್ರೆಯಲ್ಲಿಯೇ ಕ್ಷೌರ ಮಾಡಿಸಿದ್ರು. ಸುಮಾರು 10ಕ್ಕೂ ಹೆಚ್ಚು ರೋಗಿಗಗಳನ್ನು ಕರೆತಂದು ಕ್ಷೌರ, ಸ್ನಾನ ಮಾಡಿಸಿ, ಹೊಸ ಬಟ್ಟೆ ನೀಡಿ ಮಹಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿಸಿದರು.
ಈ ವೇಳೆ ಮಾತನಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಮ್ಮ ವೇದಿಕೆಯು ನಿರಂತರವಾಗಿ ಮಾನವೀಯ ಕಾರ್ಯ ಮಾಡುತ್ತಾ ಬರುತ್ತಿದೆ. ಇದರಿಂದ ಅಸಹಾಯಕರಿಗೂ ಉತ್ತಮ ಬದುಕು ಕಟ್ಟಿಕೊಡಲು ಸಮಾಜ ಜತೆಗಿದೆ ಎಂಬ ಭಾವನೆ ಬರಲು ಸಾಧ್ಯವಿದೆ. ಸರ್ಕಾರ ಕ್ಷೌರ ಭಾಗ್ಯ ಜಾರಿಗೆ ತಂದಿದೆಯಾದ್ರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತು ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿದರು.