ಕರ್ನಾಟಕ

karnataka

ETV Bharat / state

ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್​​​ ಪ್ರಚಾರ ಸಮಾವೇಶ

ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲೇ ಮೊದಲು ಗೋವಿಗೆ ಪೂಜೆ ಮಾಡಿ ನಾಮಿನೇಷನ್ ಮಾಡಿದ ಮೊದಲ ಅಭ್ಯರ್ಥಿ ಮಿಥುನ್ ರೈ ಇರಬಹುದು ಎಂದು ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಹೇಳಿದರು.

ಪ್ರಚಾರ ಸಮಾವೇಶ

By

Published : Apr 2, 2019, 9:39 AM IST


ಮಂಗಳೂರು:ದಿಲ್ಲಿಯಲ್ಲಿ ಕೂಡಾಮಂಗಳೂರು ಲೋಕಸಭೆ ಮಿಂಚಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್​ನ ನಾಯಕರು ಒಮ್ಮತದಿಂದ ಮಂಗಳೂರಿನ ಕಾಂಗ್ರೆಸ್ ಯುವ ಅಭ್ಯರ್ಥಿ ಮಿಥುನ್ ರೈಯವರನ್ನು ಕಣಕ್ಕಿಳಿಸಿದೆ ಎಂದು ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ಹೇಳಿದರು.

ಪುತ್ತೂರು ದರ್ಬೆ ಮೈದಾನದಲ್ಲಿ ನಡೆದ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರವಾಗಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಿಥುನ್ ರೈಯವರು ಹಸು-ಕರುಗಳನ್ನು ಮನೆ ಮನೆಗೆ ದಾನ ಮಾಡಿದವರು. ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲೇ ಮೊದಲು ಗೋವಿಗೆ ಪೂಜೆ ಮಾಡಿ ನಾಮಿನೇಷನ್ ಮಾಡಿದ ಮೊದಲ ಅಭ್ಯರ್ಥಿ ಮಿಥುನ್ ರೈ ಇರಬಹುದು ಎಂದರು.

ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶ

ಈ ಎಪ್ಪತ್ತು ವರ್ಷದಲ್ಲಿ ಕಾಂಗ್ರೆಸ್​ನವರು ಏನು ಮಾಡಿದ್ದಾರೆ ಎಂದು ಕೆಲವರು ಕೇಳುತ್ತಾರೆ. ಏನು ಮಾಡಿಲ್ಲ ಎಂದು ಕಾಂಗ್ರೆಸ್ ಪಟ್ಟಿ ಮಾಡಬೇಕಾಗುತ್ತದೆ. ಈ ದೇಶಕ್ಕೆ ಐಐಟಿ, ಐಐಎಂ, ಬಾಹ್ಯಾಕಾಶ ಕೇಂದ್ರ, ರೈಲ್ವೆ ಮಾರ್ಗವನ್ನು ಉನ್ನತಮಟ್ಟಕ್ಕೇರಿಸಿದ್ದು, ಬಡತನ ನಿವಾರಣೆ ಮಾಡಿದ್ದು ಕಾಂಗ್ರೆಸ್. ದ.ಕ. ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎನ್​ಎಂಪಿಟಿ, ಸುರತ್ಕಲ್ ಎನ್​ಐಟಿಕೆ, ಎಂಆರ್​ಪಿಎಲ್, ಎಂಸಿಎಫ್, ಕುದುರೆಮುಖ ಈ ಎಲ್ಲವನ್ನೂ ತಂದದ್ದು ಕಾಂಗ್ರೆಸ್. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಬಡವರು 5 ರೂ. ಸೀರೆ ಉಡುತ್ತಾರೆ ಎಂಬ ಕಾರಣಕ್ಕೆ ತಾನೂ 5 ರೂ‌. ಸೀರೆ ಉಡುತ್ತಿದ್ದರು. ಅಲ್ಲದೆ ಬಡವರಿಗೆ 5 ರೂ.ಗೆ ರೇಷನ್ ಕಾರ್ಡ್​ನಲ್ಲಿ ಸೀರೆ ಕೊಡುವ ಯೋಜನೆ ಜಾರಿಗೆ ತಂದಿದ್ದರು. ಇದು ದೇಶಕ್ಕೆ ಆದರ್ಶ ಎಂದರು.

ABOUT THE AUTHOR

...view details