ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ: ಮತ್ತೆ 7 ಸೋಂಕಿತರು ಪತ್ತೆ - ಕೋವಿಡ್​ 19

ಭಟ್ಕಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಕೂಡಾ 7 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

bhatkal corona
ಭಟ್ಕಳದಲ್ಲಿ ಕೊರೊನಾ

By

Published : May 10, 2020, 1:09 PM IST

ಕಾರವಾರ:ಜಿಲ್ಲೆಯ ಭಟ್ಕಳವನ್ನು ಕೊರೊನಾ ಸೋಂಕು ಬಿಡದೆ ಕಾಡುತ್ತಿದೆ. ಇಂದು ಕೂಡಾ ಏಳು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ಭಟ್ಕಳವನ್ನು ಕೊರೊನಾ ಕಾಡುತ್ತಿದ್ದು, ಭಟ್ಕಳ ಮಾತ್ರವಲ್ಲದೆ ಉತ್ತರಕನ್ನಡ ಜಿಲ್ಲೆಯ ಜನರನ್ನು ಬೆಚ್ಚಿ ಬೀಳು ವಂತೆ ಮಾಡಿದೆ. 16 ಮತ್ತು 15 ವರ್ಷದ ಬಾಲಕ ಸೇರಿ 50, 42, 60 ವರ್ಷದ ಪುರುಷರು ಹಾಗೂ 21 ವರ್ಷದ ಯುವತಿ ಮತ್ತು 50 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.ಉತ್ತರ ಕನ್ನಡಲ್ಲಿ ಇದುವರೆಗೆ 11 ಸೋಂಕಿತರು ಗುಣಮುಖರಾಗಿದ್ದಾರೆ.

ಮೇ 5ರಂದು 18 ವರ್ಷದ ಯುವತಿಯಲ್ಲಿ ಮೊದಲ ಬಾರಿಗೆ ಸೋಂಕು ದೃಢಪಟ್ಟಿತ್ತು. ಮೇ 8ರ ನಂತರ ಆಕೆಯ ಕುಟುಂಬಸ್ಥರು, ಪಕ್ಕದ ಮನೆಯ ಓರ್ವರು, ಆಕೆಯ ಗೆಳತಿ ಸೇರಿ 12 ಮಂದಿಗೆ ಸೋಂಕು ತಗುಲಿತ್ತು.

ಇದೀಗ ಯುವತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿಯೇ ಒಟ್ಟು 39 ಪ್ರಕರಣಗಳು ಪತ್ತೆಯಾದಂತಾಗಿದೆ. ಅದರಲ್ಲಿ 11 ಮಂದಿ ಗುಣಮುಖರಾಗಿ 28 ಮಂದಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details