ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಮತ್ತೆ ಸ್ಫೋಟಗೊಂಡಿದ್ದು, ಇಂದು ಒಟ್ಟು ಏಳು ಮಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಉತ್ತರ ಕನ್ನಡದಲ್ಲಿ ಮತ್ತೆ 7 ಕೊರೊನಾ ಪ್ರಕರಣ ಪತ್ತೆ - Yallapura Corona News
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಮತ್ತೆ ಸ್ಫೋಟಗೊಂಡಿದ್ದು, ಇಂದು ಒಟ್ಟು ಏಳು ಮಂದಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.
ಮಹಾರಾಷ್ಟ್ರದಿಂದ ಯಲ್ಲಾಪುರಕ್ಕೆ ಆಗಮಿಸಿದ್ದ ಒಂದೇ ಕುಟುಂಬದ 8 ವರ್ಷದ ಬಾಲಕ, 62 ವರ್ಷದ ವ್ಯಕ್ತಿ, 25 ವರ್ಷದ ಯುವತಿ, 10 ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜೊತೆಗೆ ಇವರ ಸಂಬಂಧಿಯಾದ 22 ವರ್ಷದ ಯುವಕ ಹಾಗೂ ಯಲ್ಲಾಪುರ ಮೂಲದ 49 ವರ್ಷದ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢವಾಗಿದೆ. ಇದರೊಂದಿಗೆ ಆಂಧ್ರ ಪ್ರದೇಶದಿಂದ ಭಟ್ಕಳಕ್ಕೆ ಆಗಮಿಸಿದ್ದ ಯುವತಿಯಲ್ಲಿ ಸೋಂಕು ಕಂಡು ಬಂದಿದ್ದು, ಒಟ್ಟು ಒಂದೇ ದಿನ 7 ಮಂದಿಯಲ್ಲಿ ಸೋಂಕು ದೃಢವಾಗಿದೆ.
ಇವರೆಲ್ಲರೂ ಮೇ ಮೂರನೇ ವಾರದಲ್ಲಿ ರಾಜ್ಯಕ್ಕೆ ಆಗಮಿಸಿ ಕ್ವಾರಂಟೈನ್ ಸಹ ಪೂರೈಸಿದ್ದರು. ಆದರೆ ಮೊದಲ ಬಾರಿ ನೆಗೆಟಿವ್ ಬಂದಿದ್ದ ವರದಿ ಎರಡನೇ ಬಾರಿಗೆ ಪಾಸಿಟಿವ್ ಬಂದಿದೆ. ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಹಾಗೇ 49 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.