ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ ಗುಣಮುಖರಾದ 7 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ - Karwar corona latest news

ಇದರೊಂದಿಗೆ ಜಿಲ್ಲೆಯ ಒಟ್ಟು 130 ಸೋಂಕಿತರ ಪೈಕಿ 106 ಮಂದಿ ಗುಣಮುಖರಾಗಿದ್ದಾರೆ. 24 ಮಂದಿ ಸೋಂಕಿತರಿಗಷ್ಟೇ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.

Karwar
Karwar

By

Published : Jun 21, 2020, 7:37 PM IST

ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಏಳು ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇವರೆಲ್ಲ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಏಳು ಮಂದಿಯ ಗಂಟಲು ದ್ರವದ ಮಾದರಿಗಳೆಲ್ಲ ಪ್ರಯೋಗಾಲಯ ವರದಿಯಲ್ಲಿ ನೆಗೆಟಿವ್ ಬಂದಿವೆ. ಈ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡ್ಲಾಗಿದೆ.

ಗುಣಮುಖರಾದವರ ಕುರಿತ ವಿವರ :ಶಿರಸಿ ಮೂಲದ 63 ವರ್ಷದ ಮಹಿಳೆ, 62 ವರ್ಷದ ಪುರುಷ, ಜೋಯ್ಡಾದ 24 ವರ್ಷದ ಯುವಕ, ದಾಂಡೇಲಿಯ 9 ವರ್ಷದ ಬಾಲಕಿ, ಹಳಿಯಾಳದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ, ಕುಮಟಾದ 35 ವರ್ಷದ ವ್ಯಕ್ತಿ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ.

ಇದರೊಂದಿಗೆ ಜಿಲ್ಲೆಯ ಒಟ್ಟು 130 ಸೋಂಕಿತರ ಪೈಕಿ 106 ಮಂದಿ ಗುಣಮುಖರಾಗಿದ್ದಾರೆ. 24 ಮಂದಿ ಸೋಂಕಿತರಿಗಷ್ಟೇ ಕ್ರಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details