ಕಾರವಾರ:ಸಿಲಿಂಡರ್ಗಳ ಸರಣಿ ಸ್ಫೋಟದಿಂದ ಮನೆಯೊಂದು ಸಂಪೂರ್ಣ ಹೊತ್ತಿ ಉರಿದಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ತಾರನಮಕ್ಕಿಯಲ್ಲಿ ತಡರಾತ್ರಿ ನಡೆದಿದೆ.
ಗೋಕರ್ಣದಲ್ಲಿ ಸರಣಿ ಸಿಲಿಂಡರ್ ಸ್ಫೋಟ... ಹೊಸ ವರ್ಷದ ದಿನವೇ ಹೊತ್ತಿ ಉರಿದ ಮನೆ - ಗೋಕರ್ಣದಲ್ಲಿ ಸರಣಿ ಸಿಲಿಂಡರ್ ಸ್ಪೋಟ
ಕುಮಟಾ ತಾಲೂಕಿನ ಗೋಕರ್ಣದ ತಾರನಮಕ್ಕಿಯಲ್ಲಿ ಸಿಲಿಂಡರ್ಗಳ ಸರಣಿ ಸ್ಫೋಟದಿಂದ ಮನೆಯೊಂದು ಸಂಪೂರ್ಣ ಹೊತ್ತಿ ಉರಿದಿದೆ.
ಮನೆಯಲ್ಲಿ ಒಟ್ಟು ಏಳು ಸಿಲಿಂಡರ್ಗಳಿದ್ದು, ಅದರಲ್ಲಿ ಒಂದರ ಹಿಂದೆ ಒಂದರಂತೆ ಒಟ್ಟು ಐದು ಸಿಲಿಂಡರ್ ಸ್ಪೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಮನೆಯ ಸದಸ್ಯರು ಹೊರಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಇಷ್ಟೊಂದು ಸಿಲಿಂಡರ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬೀಳಬೇಕಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.