ಭಟ್ಕಳ:ಭಾರತ ಜ್ಯೂನಿಯರ್ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಕರ್ನಾಟಕದ ಏಕೈಕ ಕಬಡ್ಡಿ ಪಟುವಿಗೆ ತರಬೇತಿ ಶಿಬಿರಕ್ಕೆ ಪಾಲ್ಗೊಳ್ಳಲು ಅವಕಾಶ ನೀಡದೆ ತಡೆ ಒಡ್ಡಿದ್ದು, ಇದು ಓರ್ವ ಕ್ರೀಡಾ ಪಟುವಿಗೆ ಮಾಡಿದ ಅನ್ಯಾಯವಾಗಿದೆ.
ಜ್ಯೂ.ಕಬಡ್ಡಿ ತಂಡಕ್ಕೆ ಆಯ್ಕೆಯಾದರೂ ತರಬೇತಿಗೆ ಸಿಗದ ಆಹ್ವಾನ: ಕನ್ನಡಿಗನಿಗೆ ಅನ್ಯಾಯ ಭಟ್ಕಳ ತಾಲೂಕಿನ ಬೆಳಕೆ ನಿವಾಸಿ ವಿನೋದ ಲಚ್ಮಯ್ಯ ನಾಯ್ಕ ತರಬೇತಿ ಶಿಬಿರಕ್ಕೆ ಅವಕಾಶ ವಂಚಿತ ಕ್ರೀಡಾ ಪಟು. ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ. ವಿನೋದ ಲಚ್ಮಯ್ಯ ನಾಯ್ಕ ಮೊದಲ ಹಂತದ 36 ಕ್ರೀಡಾಪಟುಗಳ ಸಾಲಿನಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟುವಾಗಿ 24ನೇ ಸ್ಥಾನ ಪಡೆದಿದ್ದ. ನಂತರ ಆರಂಭಿಸಿದ ಮೊದಲ ಹಂತದ ಆನ್‍ಲೈನ್ ತರಬೇತಿಯಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟುವಿನ ಆಯ್ಕೆಯನ್ನು ತಡೆಹಿಡಿಯಲಾಗಿದೆ. ಇದರಿಂದ ಕರ್ನಾಟಕದ ಪರವಾಗಿ ಗ್ರಾಮೀಣ ಭಾಗದ ಪ್ರತಿಭೆಯಾಗಿ ಹೊರಹೊಮ್ಮುವ ಅವಕಾಶದಿಂದ ವಂಚಿತರಾಗಬೇಕಾಗಿದೆ.
ಜ್ಯೂ.ಕಬಡ್ಡಿ ತಂಡಕ್ಕೆ ಆಯ್ಕೆಯಾದರು ತರಬೇತಿಗೆ ಸಿಗದ ಆಹ್ವಾನ, ಕನ್ನಡಿಗನಿಗೆ ಅನ್ಯಾಯ ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಕೂಟದಲ್ಲಿ ತೋರಿದ ಅಮೋಘ ಪ್ರದರ್ಶನದಿಂದ ವಿನೋದ ನಾಯ್ಕ ಭಾರತ ಕಬಡ್ಡಿ ತಂಡದ 36 ಸದಸ್ಯರಲ್ಲಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ. ದೇಶದ ಇತರ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದ್ದು, ಕರ್ನಾಟಕ ತಂಡದ ಕ್ರೀಡಾಪಟುವಿನ ಆಯ್ಕೆ ತಡೆಹಿಡಿದು ಈ ಸ್ಥಾನದಲ್ಲಿ ಬೇರೆಯವರನ್ನು ನೇಮಿಸಿರುವುದು ಕಬಡ್ಡಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಹರಿಯಾಣದಲ್ಲಿ ಫೆ. 13ರಂದು ಆಯ್ಕೆಗಾಗಿ ಪಂದ್ಯಾಟ ನಡೆದಿತ್ತು. ಅಲ್ಲಿ ಕರ್ನಾಟಕ ರಾಜ್ಯದಿಂದ ಜ್ಯೂನಿಯರ್ ವಿಭಾಗದಲ್ಲಿ ಏಕೈಕ ಆಟಗಾರನಾಗಿ ಭಟ್ಕಳ ಗ್ರಾಮೀಣ ಪ್ರತಿಭೆ ವಿನೋದ ನಾಯ್ಕ ಆಯ್ಕೆಯಾಗಿದ್ದರು. ಕೊರೊನಾ ಕಾರಣದಿಂದ ಅಂದು ನಡೆಯಬೇಕಿದ್ದ ತರಬೇತಿ ಶಿಬಿರವನ್ನು ಮುಂದೂಡಲಾಗಿತ್ತು. ತರಬೇತಿಗೆ ಪಾಲ್ಗೊಳ್ಳಲು ದಿಲ್ಲಿಯಲ್ಲಿರುವ ಕಬಡ್ಡಿ ಅಸೋಶಿಯೆಷನ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿನೋದ ಹೆಸರು ಕೈಬಿಡಲಾಗಿತ್ತು.
ಈ ಕುರಿತು ಕೇಳಿದಾಗ ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎನ್ನುವ ಮಾಹಿತಿ ದೊರಕಿದೆ. ಹಾಗೂ ಸೀನಿಯರ್ ವಿಭಾಗದಲ್ಲೂ ಕರ್ನಾಟಕದ ಏಕೈಕ ಆಟಗಾರ ಐವರ್ನಾಡು ಗ್ರಾಮದ ಸಚಿನ ಪ್ರತಾಪ ಅವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದು, ಇಲ್ಲೂ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶದಿಂದ ವಂಚಿಸಲಾಗಿದೆ.