ಶಿರಸಿ : ಅರಣ್ಯದಲ್ಲಿ ಅಕ್ರಮವಾಗಿ ಕತ್ತರಿಸಿಟ್ಟಿದ್ದ ಶ್ರೀಗಂಧದ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡದ ಜೊಯಿಡಾ ತಾಲೂಕಿನ ನಾಗೋಡಾದಲ್ಲಿ ನಡೆದಿದೆ.
ಅಕ್ರಮ ಶ್ರೀಗಂಧ ಮರಗಳ ವಶ : ಆರೋಪಿಗಳಿಗಾಗಿ ಹುಡುಕಾಟ - undefined
ಶಿರಸಿಯ ಅರಣ್ಯ ಪ್ರದೇಶವೊಂದರಲ್ಲಿ ಕಳ್ಳರು ಅಕ್ರಮವಾಗಿ ಕತ್ತರಿಸಿಟ್ಟಿದ್ದ ಶ್ರೀಗಂಧದ ಮರಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
![ಅಕ್ರಮ ಶ್ರೀಗಂಧ ಮರಗಳ ವಶ : ಆರೋಪಿಗಳಿಗಾಗಿ ಹುಡುಕಾಟ](https://etvbharatimages.akamaized.net/etvbharat/prod-images/768-512-3890768-thumbnail-3x2-srs.jpg)
ಕಳ್ಳರಿಗಾಗಿ ಹುಡುಕಾಟ
ಸುಮಾರು 2 ಲಕ್ಷ ರೂ. ಮೌಲ್ಯದ ಗಂಧದ ಕಟ್ಟಿಗೆಯನ್ನು ಜಪ್ತಿ ಮಾಡಲಾಗಿದೆ. ನಾಗೋಡಾ ಅರಣ್ಯದಲ್ಲಿ ಎರಡು ಗಂಧದ ಮರಗಳನ್ನು ಬುಡದ ಸಮೇತ ಕತ್ತರಿಸಿ, ಅಲ್ಲೇ ಒಣಗಲು ಬಿಟ್ಟು ಆರೋಪಿಗಳು ಸ್ಥಳದಿಂದ ತೆರಳಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.
ಜೊಯಿಡಾ ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ.