ಕಾರವಾರ: ಅಕ್ರಮ ಗೋವಾ ಮದ್ಯವನ್ನು ಅರಣ್ಯ ಪ್ರದೇಶದಲ್ಲಿ ಹೊತ್ತು ತರುವುದನ್ನು ಗಮನಿಸಿದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 1.71 ಲಕ್ಷ ಮೌಲ್ಯದ ಮದ್ಯ ಜಪ್ತಿಪಡಿಸಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಹೋಟೆಗಾಳಿ ಭೀಮಕೋಲ್ನಲ್ಲಿ ನಡೆದಿದೆ.
ಅರಣ್ಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.71 ಲಕ್ಷ ಮೌಲ್ಯದ ಗೋವಾ ಮದ್ಯ ವಶ ... - Goa seized for illegal liquor
ಗೋವಾ ಮದ್ಯವನ್ನು ಅರಣ್ಯ ಪ್ರದೇಶದಲ್ಲಿ ಹೊತ್ತು ತರುವುದನ್ನು ಗಮನಿಸಿದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 1.71 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಗೋವಾ ಮದ್ಯ ವಶ
ಕಾರವಾರದ ಸಮೀರ ಮಾಳ್ಸೇಕರ್, ವಿಜಯ ಪಡವಳಕರ್ ಹಾಗೂ ರಮಾಕಾಂತ ಮಾಳ್ಸೇಕರ್ ಎಂಬ ಆರೋಪಿಗಳು ಗೋವಾದ 176 ಲೀ. ಮದ್ಯ ಹಾಗೂ 198 ಲೀ. ಗೋವಾದ ಸ್ಪೆಷಲ್ ಪಾಮ್ ಫೆನ್ನಿಯನ್ನು ತಲೆಹೊರೆಯ ಮೇಲೆ ಹೊತ್ತುಕೊಂಡು ಕಾಡು ದಾರಿಯಲ್ಲಿ ಬರುತ್ತಿದ್ದರು.
ಈ ವೇಳೆ ಅಬಕಾರಿ ಅಧಿಕಾರಿಗಳನ್ನು ನೋಡಿ ಆರೋಪಿಗಳು ಪರಾರಿಯಾಗಿದ್ದು, ಮದ್ಯವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕಿ ಸುವರ್ಣಾ ನಾಯ್ಕ, ರಕ್ಷಕರಾದ ಅಶೋಕ, ಎಂ.ಎ.ನಾಯ್ಕ, ಹೇಮಚಂದ್ರ, ವಾಹನ ಚಾಲಕ ಪರೇಶ್ ದೇಸಾಯಿ ಈ ದಾಳಿಯಲ್ಲಿದ್ದರು.