ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯುಸಿ ಫಲಿತಾಂಶ: ಉತ್ತರ ಕನ್ನಡದ ಟಾಪ್ 10 ವಿದ್ಯಾರ್ಥಿಗಳು - ಉತ್ತರ ಕನ್ನಡ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ. ಉತ್ತರ ಕನ್ನಡ ಜಿಲ್ಲೆ ಈ ಬಾರಿ 11,393 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ. 89.74 ರಷ್ಟು ದಾಖಲಾಗಿದೆ.

Top 10 Students of Uttara Kannada
ಉತ್ತರ ಕನ್ನಡದ ಟಾಪ್ 10 ವಿದ್ಯಾರ್ಥಿಗಳು

By

Published : Apr 22, 2023, 7:28 AM IST

ಕಾರವಾರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಕಳೆದ ಬಾರಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಈ ಬಾರಿ ಶೇ.89.74 ಫಲಿತಾಂಶದೊಂದಿಗೆ 4ನೇ ಸ್ಥಾನಕ್ಕೇರಿದೆ. ಜಿಲ್ಲೆಯಲ್ಲಿ ರೆಗ್ಯೂಲರ್ ಆಗಿ ಪರೀಕ್ಷೆ ಬರೆದ 12,696 ವಿದ್ಯಾರ್ಥಿಗಳ ಪೈಕಿ 11,393 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ. 89.74 ದಾಖಲಾಗಿದೆ. ಕಳೆದ ಬಾರಿ ಶೇ.74.33 ರಷ್ಟು ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಶೇ. 15.41 ರಷ್ಟು ಫಲಿತಾಂಶ ಹೆಚ್ಚಳವಾಗಿ ಒಂದು ಸ್ಥಾನ ಜಿಗಿತ ಕಂಡಿದೆ.

ಜಿಲ್ಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದ 623 ವಿದ್ಯಾರ್ಥಿಗಳ ಪೈಕಿ 318 ಹಾಗೂ ಪುನಾರಾವರ್ತಿತವಾಗಿ ಪರೀಕ್ಷೆ ಬರೆದ 1,026 ವಿದ್ಯಾರ್ಥಿಗಳ ಪೈಕಿ 529 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಪರೀಕ್ಷೆ ಬರೆದ 6,268 ಬಾಲಕರ ಪೈಕಿ 5,079 ಮಂದಿ ಉತ್ತೀರ್ಣರಾಗಿ ಶೇ.81.03 ಹಾಗೂ 8,077 ಬಾಲಕೀಯರ ಪೈಕಿ 7,161 ಮಂದಿ ಉತ್ತೀರ್ಣರಾಗಿ ಶೇ. 88.66 ಫಲಿತಾಂಶ ದಾಖಲಿಸಿದ್ದಾರೆ.

ವಿದ್ಯಾರ್ಥಿನಿಯರೇ ಮೇಲುಗೈ:ಈ ಬಾರಿಯೂ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ 3,563 ವಿದ್ಯಾರ್ಥಿಗಳಲ್ಲಿ 2,962, ವಾಣಿಜ್ಯ ವಿಭಾಗದಲ್ಲಿ 5,185 ವಿದ್ಯಾರ್ಥಿಗಳಲ್ಲಿ 4,675 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 3,948 ವಿದ್ಯಾರ್ಥಿಗಳಲ್ಲಿ 3,756 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗ: ಶಿರಸಿ ಚೈತನ್ಯ ಪಿಯು ಕಾಲೇಜಿನ ರಜತಾ ಹೆಗಡೆ (600ಕ್ಕೆ 594), ಸಿದ್ದಾಪುರದ ಚೇತನಾ ಪಿಯು ಕಾಲೇಜಿನ ಚಿನ್ಮಯಿ ನಾಯ್ಕ (592), ಕಾರವಾರ ಸರ್ಕಾರಿ ಪಿಯು ಕಾಲೇಜಿನ ಮೋಕ್ಷದಾ ವೆರ್ಣೇಕರ(591), ಶಿರಸಿ ಚೈತನ್ಯ ಪಿಯು ಕಾಲೇಜಿನ ರೇಷ್ಮಾ ಹೆಗಡೆ (591), ಶಿರಸಿ ಎಂಇಎಸ್ ಪಿಯು ಕಾಲೇಜಿನ ರಶ್ಮಿ ಪೈ (590), ಕಾರವಾರ ಸರ್ಕಾರಿ ಪಿಯು ಕಾಲೇಜಿನ ಮನಸ್ವಿನಿ ನಾಯ್ಕ(589), ಎಂಇಎಸ್‌ನ ತೃಪ್ತಿ ರೋಹಿತ (588), ಕುಮಟಾದ ಸರಸ್ವತಿ ಪಿಯು ಕಾಲೇಜಿನ ರಂಜನಾ ಮಡಿವಾಳ(588), ಚೈತನ್ಯ ಕಾಲೇಜಿನ ಶಿವಾನಿ ಜೋಶಿ(588), ಸರಸ್ವತಿ ಕಾಲೇಜಿನ ಶ್ರೀನಂದಾ ಶಿವಪ್ರಸಾದ (586) ಅಂಕ ಪಡೆದಿದ್ದಾರೆ.

ಕಲಾ ವಿಭಾಗ: ಶಿರಸಿ ಮಾರಿಕಾಂಬ ಕಾಲೇಜಿನ ಅನನ್ಯಾ ಲಮಾಣಿ(577), ಹುಲೇಕಲ ಶ್ರೀದೇವಿ ಕಾಲೇಜಿನ ಭಾಗ್ಯಲಕ್ಷಿ ಹೆಗಡೆ(574), ಹೊನ್ನಾವರ ಎಸ್‌ಡಿಎಂ ಕಾಲೇಜಿನ ಸ್ಪೂರ್ತಿ ನಾಯ್ಕ(572), ಆಳಂಕಿ ಶ್ರೀನಿಧಿ ಆರ್. (570), ಎಂಇಎಸ್‌ನ ಧನಲಕ್ಷಿ ಕುರ್ಡೇಕರ(572), ದಾಂಡೇಲಿ ಸರ್ಕಾರಿ ಕಾಲೇಜಿನ ಲಾವಣ್ಯಾ ಪರಗೊಂಡ(568), ಚಿತ್ತಾಕುಲ ಶಿವಾಜಿ ಕಾಲೇಜಿನ ರಿಂಕಲ್ ವೆರ್ಣೇಕರ(565), ಕುಮಟಾ ಬೆಣ್ಣೆ ಸರ್ಕಾರಿ ಕಾಲೇಜಿನ ಗೀತಾ ನಾಯ್ಕ(564), ಡಾ. ಎ.ವಿ.ಬಾಳಿಗಾ ಕಾಲೇಜಿನ ಪ್ರಸಾದ ನಾಯ್ಕ(562) ಅಂಕ ಪಡೆದಿದ್ದಾರೆ.

ವಾಣಿಜ್ಯ ವಿಭಾಗ: ಎಂಇಎಸ್ ಕಾಲೇಜಿನ ಅಚಲಾ ಹೆಗಡೆ(593), ಅಂಜಲಿ ಉಡುಪಿಕರ(591), ಆರ್.ಎನ್.ಶೆಟ್ಟಿ ಕಾಲೇಜಿನ ಸಂದೇಶ ಶೆಟ್ಟಿ(590), ವಿದ್ಯೋದಯ ಕಾಲೇಜಿನ ನಾಗಶ್ರೀ ಹೆಗಡೆ(589), ಕಾರವಾರದ ದಿವೇಕರ ಕಾಲೇಜಿನ ಎಂ.ಹಫೀಜ್(589), ಮಾರಿಕಾಂಬಾ ಕಾಲೇಜಿನ ಭೂಮಿಕಾ ಹೆಗಡೆ(589), ಪ್ರೀಮಿಯರ್ ಕಾಲೇಜಿನ ದೃಷ್ಠಿ ಶೆಟ್ಟಿ(588), ವಾಯ್‌ಟಿಎಸ್‌ಎಸ್‌ನ ಪ್ರಣವಕುಮಾರ ಭಟ್(588), ಡಾ.ಎ.ವಿ.ಬಾಳಿಗಾ ಕಾಲೇಜಿನ ಶಿವಾನಿ ವೆರ್ಣೇಕರ(588), ಎಸ್‌ಡಿಎಂ ಕಾಲೇಜಿನ ಪ್ರೀತಿ ನಾಯಕ(588), ಅಂಜುಮಾನ ಕಾಲೇಜಿನ ನವನೀನ್ ಮೊಹಮ್ಮದ್ ಮೋಹ್ಸಿನ್ ಕೋಲಾ(588), ಸರಸ್ವತಿ ಕಾಲೇಜಿನ ಶ್ರೀಲಕ್ಷ್ಮೀ ಶೆಟ್ಟಿ (588) ಅಂಕ ಪಡೆದು ಜಿಲ್ಲೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್​, ಯಾದಗಿರಿ ಲಾಸ್ಟ್​

ABOUT THE AUTHOR

...view details