ಕರ್ನಾಟಕ

karnataka

ETV Bharat / state

ಪಂಚಾಯಿತಿಗೆ ನುಗ್ಗಿ SDMC ಅಧ್ಯಕ್ಷನಿಂದ ಪಿಡಿಓ ಮೇಲೆ ಹಲ್ಲೆ ಆರೋಪ - ಎಸ್​ಡಿಎಂಸಿ ಅಧ್ಯಕ್ಷನಿಂದ ಪಿಡಿಒ ಮೇಲೆ ಹಲ್ಲೆ

ಎಸ್​ಡಿಎಂಸಿ ಅಧ್ಯಕ್ಷನೋರ್ವ ಪಿಡಿಒ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವ ಆರೋಪದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಳಿಬಂದಿದೆ.

sdmc-president-beats-pdo-in-uttara-kannada
ಪಂಚಾಯಿತಿಗೆ ನುಗ್ಗಿ SDMC ಅಧ್ಯಕ್ಷನಿಂದ ಪಿಡಿಓ ಮೇಲೆ ಹಲ್ಲೆ ಆರೋಪ

By

Published : Sep 24, 2021, 2:15 AM IST

Updated : Sep 24, 2021, 3:34 AM IST

ಕಾರವಾರ:ಎಸ್​ಡಿಎಂಸಿ ಅಧ್ಯಕ್ಷನೋರ್ವ ಪಂಚಾಯಿತಿಗೆ ನುಗ್ಗಿ ಪಿಡಿಓ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಗೌಸಸಾಬ್ ಮೌಲಾಲಿ ಎಂಬಾತ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಂದಿಕಟ್ಟಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಲಮಾಣಿ ದೂರು ನೀಡಿದ್ದಾರೆ.

ನಂದಿಕಟ್ಟಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್​ಡಿಎಂಸಿ ಅಧ್ಯಕ್ಷ ಗೌಸಸಾಬ್ ಮೌಲಾಲಿ, ಶಾಲಾ ಆವರಣದಲ್ಲಿರುವ ನಾಲ್ಕೈದು ಸಾಗುವಾನಿ ಮರಗಳನ್ನು ಕಡಿಯಲು ಎನ್‌ಒಸಿ ಪತ್ರಕ್ಕೆ ಕೋರಿ ಪಂಚಾಯಿತಿಗೆ ಜುಲೈ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರಂತೆ.

ಈ ಅರ್ಜಿ ಪರಿಶೀಲನೆ ನಡೆಸಿದ ಪಿಡಿಒ ವೆಂಕಪ್ಪ, ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಎನ್‌ಒಸಿ ಪತ್ರ ಪಡೆಯುವಂತೆ ಹಿಂಬರಹ ನೀಡಿದ್ದರು. ಈ ವಿಷಯಕ್ಕೆ ಕೋಪಗೊಂಡ ಗೌಸಸಾಬ್​​ ಪಿಡಿಒ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾನೆ ಎಂದು ಪಿಡಿಓ ಆರೋಪಿಸಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ಆರ್ಥಿಕ ಶಿಸ್ತು ತರಲು ಅಪ್ರಿಯವಾದರೂ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ: ಸಿಎಂ ಬೊಮ್ಮಾಯಿ

Last Updated : Sep 24, 2021, 3:34 AM IST

ABOUT THE AUTHOR

...view details