ಶಿರಸಿ: ಗಣೇಶ ಚತುರ್ಥಿ ಎಂದರೆ ಸಂಭ್ರಮದ ಜೊತೆಗೆ ಕುತೂಹಲವೂ ಇರುತ್ತದೆ. ಹಬ್ಬದ ಸಂಭ್ರಮವಾದರೆ, ಗಣೇಶ ಮೂರ್ತಿಗಳ ತಯಾರಿಕೆಯ ಕಸರತ್ತು ನೋಡುವ ಕುತೂಹಲ ಇನ್ನೊಂದು ಕಡೆ ಇರುತ್ತದೆ.
ಕಣ್ಮನ ಸೆಳೆಯುವ ವಿಭಿನ್ನ ರೂಪದ ಗಣೇಶ ಮೂರ್ತಿಗಳು! - ಕಲಾವಿದ ಸತ್ಯಭಂಡಾರಿ
ಗಣೇಶ ಚತುರ್ಥಿ ಎಂದರೆ ಸಂಭ್ರಮದ ಜೊತೆಗೆ ಕುತೂಹಲವೂ ಇರುತ್ತದೆ. ಹಬ್ಬದ ಸಂಭ್ರಮವಾದರೆ, ಗಣೇಶ ಮೂರ್ತಿಗಳ ತಯಾರಿಕೆಯ ಕಸರತ್ತು ನೋಡುವ ಕುತೂಹಲ ಇನ್ನೊಂದು ಕಡೆ ಇರುತ್ತದೆ.
ವಿಭಿನ್ನ ರೂಪದ ಗಣೇಶ ಮೂರ್ತಿ
ವಿಶೇಷ ಗಣಪತಿಗಳ ತಯಾರಿಕೆಯಲ್ಲಿ ಎತ್ತಿದ ಕೈ ಆಗಿರೋ ಉತ್ತರ ಕನ್ನಡದ ಸಿದ್ದಾಪುರದ ಭುವನಗಿರಿಯ ಸತ್ಯ ಭಂಡಾರಿ ಎಂಬುವವರು ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನ ಗಣಪತಿಗಳನ್ನು ತಯಾರಿಸೋ ಮೂಲಕ ಕಲೆಗೆ ಜೀವ ತುಂಬಿದ್ದಾರೆ. ಕಳೆದ 20 ವರ್ಷಗಳಿಂದ ಗಣಪತಿ ತಯಾರಿಕೆಯಲ್ಲಿ ಮಗ್ನರಾಗಿರೋ ಸತ್ಯ ಭಂಡಾರಿ ಯಾವುದೇ ಅಚ್ಚುಗಳಿಲ್ಲದೇ ಗಣಪತಿ ಮೂರ್ತಿ ತಯಾರಿಸುತ್ತಾರೆ. ಹಿಂದಿನ ವರ್ಷ ಕೇಸರಿ, ಬಿಳಿ, ಹಸಿರನ್ನು ಹೊದ್ದು ಭಾರತದ ಧ್ವಜದ ಪ್ರತಿರೂಪದ ಗಣಪನನ್ನು ಪರಿಚಯಿಸಿದ್ದ ಸತ್ಯ, ಈ ವರ್ಷ ಯಕ್ಷವೇಷಧಾರಿ ಗಣಪನನ್ನು ತಯಾರಿಸಿದ್ದಾರೆ.