ಭಟ್ಕಳ: ತಾಲೂಕಿನ ಸೋಡಿಗದ್ದೆ ಕ್ರಾಸ್ ಬಳಿಯ ಸರ್ಪನಕಟ್ಟೆ ಪೊಲೀಸ್ ಚೆಕ್‍ಪೋಸ್ಟ್, ರಸ್ತೆಗಿಂತ 5 ರಿಂದ 6 ಅಡಿ ಕೆಳಗಿದೆ. ಆಳೆತ್ತರಕ್ಕೆ ಮಣ್ಣು ತುಂಬಿಸಿ ಚೆಕ್‍ಪೋಸ್ಟನ್ನು ಮಾಡಿದ್ದರಿಂದ, ಇಲ್ಲಿನ ಸಿಬ್ಬಂದಿ ಭಯದಲ್ಲಿ ಹಗಲು ರಾತ್ರಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.
ರಸ್ತೆಗಿಂತ ಆರು ಅಡಿ ಕೆಳಗಿರುವ ಚೆಕ್‍ಪೋಸ್ಟ್: ಆತಂಕದಲ್ಲಿ ಪೊಲೀಸ್ ಸಿಬ್ಬಂದಿ - Sarpanakatte police check post problem
ಸೋಡಿಗದ್ದೆ ಕ್ರಾಸ್ ಬಳಿಯ ಸರ್ಪನಕಟ್ಟೆ ಪೊಲೀಸ್ ಚೆಕ್ ಪೋಸ್ಟ್ ರಸ್ತೆಗಿಂತ 5 ರಿಂದ 6 ಅಡಿ ಕೆಳಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಪರಿಣಾಮ, ಆಳೆತ್ತರಕ್ಕೆ ಮಣ್ಣು ತುಂಬಿಸಿ ಡಾಂಬರೀಕರಣ ಮಾಡಿರುವುದು ಅಪಘಾತಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ.
ಹೆದ್ದಾರಿಯಲ್ಲಿ ವೇಗದ ವಾಹನ ಓಡಾಟಕ್ಕೆ ತಡೆಯೊಡ್ಡಲು, ಹಾಗೂ ವಾಹನ ತಪಾಸಣೆಗಾಗಿ ನಿರ್ಮಿಸುವ ಚೆಕ್ ಪೋಸ್ಟ್ಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ವಾಹನಗಳ ನಿಯಂತ್ರಣ ತಪ್ಪಿ, ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದರೇ, ವಾಹನ ನೇರವಾಗಿ ಚೆಕ್ ಪೋಸ್ಟ್ ಮೇಲೆ ಬೀಳುವ ಎಲ್ಲಾ ಸಾಧ್ಯತೆ ಇದೆ. ಚೆಕ್ಪೋಸ್ಟ್ನ್ನು ರಸ್ತೆಗೆ ಸಮವಾಗಿ ನಿರ್ಮಿಸಿಕೊಡಬೇಕೆಂದು ಪೊಲೀಸರು, ಐಆರ್ಬಿ ಕಂಪನಿಗೆ ಮನವಿ ಮಾಡಿದ್ದಾರೆ.