ಕರ್ನಾಟಕ

karnataka

ETV Bharat / state

ಅಕ್ರಮ ಗಂಧದ ತುಂಡು ಸಾಗಾಟ ಪ್ರಕರಣ: ಮತ್ತೋರ್ವ ಆರೋಪಿ ಬಂಧನ - sirasi latest news

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಲಿಡ್ಕರ್​ ಕಾಲೋನಿ ಕ್ರಾಸ್​ ಬಳಿ ಸೆ.10ರಂದು ಪೊಲೀಸರು ದಾಳಿ ನಡೆಸಿ, ಗಂಧದ ತುಂಡುಗಳು ಹಾಗೂ ಇಬ್ಬರು ಆರೋಪಿಗಳನ್ನ ಬಂಧಿಸಿದ್ದರು. ಈ ವೇಳೆ ತಪ್ಪಿಸಿಕೊಂಡಿದ್ದ ಆರೋಪಿ ಅಕ್ಬರ್​ನನ್ನು ಇಂದು ಬಂಧಿಸಲಾಗಿದೆ.

one more accused arrest in sirsi
ಆರೋಪಿ ಅಕ್ಬರ್ ಇಬ್ರಾಹಿಂ ಶೇಖ್

By

Published : Sep 15, 2020, 7:33 PM IST

ಶಿರಸಿ: ಶ್ರೀಗಂಧ ಮರದ ತುಂಡುಗಳ ಅಕ್ರಮ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಕ್ಬರ್ ಇಬ್ರಾಹಿಂ ಶೇಖ್

ಇಲ್ಲಿನ ಲಿಡ್ಕರ್ ಕಾಲೋನಿ ಕ್ರಾಸ್ ಬಳಿ ಸೆ.10ರಂದು ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಅಂದಾಜು 26 ಸಾವಿ ಮೌಲ್ಯದ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ತಲೆ ಮರೆಸಿಕೊಂಡಿದ್ದ ಆರೋಪಿ ಕಸ್ತೂರ ಬಾ ನಗರದ ಸುಲಾಮತ್ ಗಲ್ಲಿಯ ಅಕ್ಬರ್ ಇಬ್ರಾಹಿಂ ಶೇಖ್​ನನ್ನು ಈಗ ಬಂಧಿಸಲಾಗಿದೆ.

ಪರಾರಿಯಾದ ಆರೋಪಿ ಬಂಧಿಸಲು ಜಾಲ ಬೀಸಿದ್ದ ಮಾರುಕಟ್ಟೆ ಪೊಲೀಸರು, ಇಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ABOUT THE AUTHOR

...view details