ಕಾರವಾರ:ಕರಾವಳಿ ನಗರಿ ಕಾರವಾರದಲ್ಲಿ ವಾಣಿಜ್ಯ ಬಂದರು ವಿಸ್ತರಣೆಯ ಕೇಂದ್ರದ ಸಾಗರಮಾಲಾ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ಅಡ್ಡಿಯಾಗುವುದರ ಜೊತೆಗೆ ಇರುವ ಏಕೈಕ ಕಡಲತೀರಕ್ಕೂ ಹಾನಿಯಾಗುವ ಹಿನ್ನೆಲೆ ಯೋಜನೆ ಕೈಬಿಡುವಂತೆ ನೂರಾರು ಮೀನುಗಾರರು ಪ್ರತಿಭಟಿಸುವ ಮೂಲಕ ಒತ್ತಾಯಿಸಿದ್ದು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ.
ಬಂದರು ಇಲಾಖೆ ಸಾಗರಮಾಲಾ ಕುರಿತು ವಿಡಿಯೋವೊಂದನ್ನು ಬಿಡುಗಡೆಗೊಳಿಸಿದ್ದು, ಇದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಯೋಜನೆಯಿಂದ ಕಡಲ ತೀರದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಕಾಮಗಾರಿಗೆ ಮೀನುಗಾರರು ಅಡ್ಡಿಪಡಿಸಿದ್ದು, ಪ್ರಕರಣ ಕೋರ್ಟ್ ವಿಚಾರಣೆಯಲ್ಲಿದೆ.
ರಾಜ್ಯದ ಈ ಸಾಲಿನ ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸಾಗರಮಾಲಾ ಯೋಜನೆಯಡಿ 1,880 ಕೋಟಿ ಅನುದಾನವನ್ನು 24 ವಿವಿಧ ಯೋಜನೆಗಳು ಸೇರಿದಂತೆ ಕಾರವಾರ ಬಂದರು ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಯೋಜನೆಯಡಿ ಕಾರವಾರ ಬಂದರು ಅಭಿವೃದ್ಧಿಯ ಕುರಿತು ಸರ್ಕಾರ ಪ್ರಸ್ತಾಪಿಸಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.