ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಲಾಕ್ ಡೌನ್ ವಿನಾಯಿತಿ ನಡುವೆಯೂ ಕೆಲ ನಿರ್ಬಂಧ... ಇಲ್ಲಿದೆ ನೋಡಿ ಸಂಪೂರ್ಣ ವಿವರ - uttara kannada lock down relaxation

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧ ಹಾಗೂ ವಿನಾಯಿತಿಗಳನ್ನು ನಿಗದಿಪಡಿಸಿದ್ದು, ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ಹರೀಶ ಕುಮಾರ್ ಹೇಳಿದ್ದಾರೆ.

dc

By

Published : May 5, 2020, 8:23 AM IST

ಕಾರವಾರ: ಉತ್ತರಕನ್ನಡದಲ್ಲಿ ಲಾಕ್ ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧ ಹಾಗೂ ವಿನಾಯಿತಿಗಳನ್ನು ನಿಗದಿಪಡಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಕೋವಿಡ್ ನಿಯಂತ್ರಿಸಲು ಪ್ರತಿಯೊಬ್ಬರು ತಪ್ಪದೆ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ಹರೀಶ ಕುಮಾರ್ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಲಹೆಯಂತೆ ತಿರ್ಮಾನ ಕೈಗೊಳ್ಳಲಾಗಿದ್ದು, ಲಾಕ್ ಡೌನ್ ನಿರ್ಬಂಧ ಹಾಗೂ ಸಡಿಲಿಕೆಯ ಪ್ರಮುಖ ಅಂಶಗಳು ಇಲ್ಲಿದೆ.

  • ಜಿಲ್ಲೆಯಲ್ಲಿ ಮೇ 4 ರಿಂದ ಮೇ 17ರ ಮದ್ಯರಾತ್ರಿಯವರೆಗೆ ಸಂಜೆ 7.ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಸಿಆರ್​ಪಿಸಿ ಕಲಂ 144ರಡಿ ವೈದ್ಯಕೀಯ, ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
  • ಕಂಟೈನ್ಮೆಂಟ್ ಪ್ರದೇಶವಾದ ಭಟ್ಕಳದಲ್ಲಿ ಎಂದಿನಂತೆ ನಿರ್ಬಂಧ ಮುಂದುವರಿಯಲಿದೆ.
  • ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ ರವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವುದು.
  • ಜಿಲ್ಲೆಯ ಎಲ್ಲ ನಗರ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವುದು.
  • ನಗರ ಪ್ರದೇಶಗಳಲ್ಲಿ ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧ.
  • ಹೊರ ರಾಜ್ಯಗಳಿಗೆ ತೆರಳುವವರು ಸೇವಾ ಸಿಂದು ತಂತ್ರಾಂಶ ಮೂಲಕ ಅರ್ಜಿ ಸಲ್ಲಿಸಿ ಪಾಸ್ ಪಡೆಯಲು ಅವಕಾಶ.
  • ಬೇರೆ ತಾಲೂಕು, ಜಿಲ್ಲೆಗೆ ಹೋಗಬಯಸುವರು ಸಂಬಂಧಿಸಿದ ತಹಸೀಲ್ದಾರ್ ಕಚೇರಿಗೆ (ಭಟ್ಕಳ ಹೊರತು ಪಡಿಸಿ) ಅರ್ಜಿ ಸಲ್ಲಿಸುವುದು.
  • ವೈನ್ ಅಂಗಡಿಗಳು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ತೆರೆಯಲು ಅವಕಾಶ.
  • ಅನುಮತಿ ಪಡೆದ ಆಟೋ ಹಾಗೂ ಟ್ಯಾಕ್ಸಿಗಳಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅನುಮತಿ.
  • ಸಾರ್ವಜನಿಕ ಸಾರಿಗೆ ಅಥವಾ ಸಾಮೂಹಿಕ ಸಾರಿಗೆ ಸಂಚಾರ ಇರುವುದಿಲ್ಲ.
  • ಹೋಟೆಲ್‌ಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಪಾರ್ಸಲ್​ಗೆ ಮಾತ್ರ ಅನುಮತಿ.
  • ಭಟ್ಕಳ ಹೊರತುಪಡಿಸಿ ಪರ್ಶಿಯನ್ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸಲು ಅನುಮತಿ. ಆದರೆ ಸಾಮಾಜಿಕ ಕಾಯ್ದುಕೊಳ್ಳುವುದು ಕಡ್ಡಾಯ.
  • ಪೆಟ್ರೋಲ್ ಪಂಪ್‌ಗಳು 24 ಗಂಟೆಗಳವರೆಗೆ ತೆರೆದಿರುತ್ತವೆ.

ABOUT THE AUTHOR

...view details