ಕರ್ನಾಟಕ

karnataka

ETV Bharat / state

ಶಾಲೆಯಲ್ಲಿ ಆರ್​​ಎಸ್​ಎಸ್ ಪ್ರಶಿಕ್ಷಣ ಶಿಬಿರಕ್ಕೆ ಅವಕಾಶ ನೀಡಿಲ್ಲ: ಸಚಿವ ಪೂಜಾರಿ - Minister Kota srinivasa Poojari

ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಕೊಡುತ್ತೇವೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಶಿಬಿರಗಳನ್ನು ಆಯೋಜನೆ ಮಾಡುತ್ತೇವೆ. ಅದನ್ನು ಬಿಟ್ಟು ಆರ್​ಎಸ್​ಎಸ್​​ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅವಕಾಶ ಕೊಟ್ಟಿಲ್ಲ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಸಚಿವ ಕೋಟಾ ಶ್ರೀನಿವಾಸ ಪೂಜಾರಿ

By

Published : Oct 11, 2022, 1:48 PM IST

Updated : Oct 11, 2022, 2:22 PM IST

ಕಾರವಾರ:ವಸತಿ ಶಾಲೆಯಲ್ಲಿ ಆರ್​ಎಸ್ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅವಕಾಶ ನೀಡಿಲ್ಲ. ಆದರೆ ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಯಾವುದೇ ಉತ್ತಮ ಸಂದೇಶ ಕೊಡುವ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರದಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಅವರು, ಯಲ್ಲಾಪುರ ಮತ್ತು ಕಲ್ಲಿಯ ಶಾಲೆಗಳಲ್ಲಿ ಆರ್​ಎಸ್​ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ವಿರೋಧ ವ್ಯಕ್ತವಾಗಿದೆ. ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆ ಕೊಡುತ್ತೇವೆ. ರಜೆ ಸಂದರ್ಭದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜನೆ ಮಾಡುತ್ತೇವೆ. ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಉತ್ತಮ ಸಂದೇಶ ಕೊಡುವ ಯಾವುದೇ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ ಎಂದು ಹೇಳಿದರು.

ನಿಷೇಧಿತ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ಆರ್​ಎಸ್​​ಎಸ್ ಸಂಘಟನೆಗೆ ನಾವು ಅವಕಾಶ ಕೊಟ್ಟಿಲ್ಲ. ಅದು ತಪ್ಪೋ ಸರಿಯೇ ಎನ್ನುವ ಪ್ರಶ್ನೆಯೇ ಇಲ್ಲ. ಟೀಕೆ ಮಾಡುವವರು ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಟೀಕೆ ಮಾಡಲಿ ಎಂದು ಸಚಿವರು ತಿರುಗೇಟು ನೀಡಿದರು.

ಇದನ್ನೂ ಓದಿ:ಸರ್ಕಾರಿ ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್​ ತಾಲೀಮು ಶಿಬಿರ.. ಎಸ್​ಎಫ್​ಐ ಆರೋಪ

Last Updated : Oct 11, 2022, 2:22 PM IST

ABOUT THE AUTHOR

...view details