ಶಿರಸಿ : ಶಿರಸಿಯ ಮಾರಿಕಾಂಬ ಜಾತ್ರಾ ಅಂಗವಾಗಿ ಇಲ್ಲಿನ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ, ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಹಾಗೂ ರೌಡಿಶೀಟರ್ಗಳ ಪರೇಡ್ ನಡೆಸಲಾಯಿತು.
ಶಿರಸಿಯಲ್ಲಿ ಮಾರಿಕಾಂಬ ಜಾತ್ರೆ ನಿಮಿತ್ತ ರೌಡಿ ಪರೇಡ್ - ಶಿರಸಿಯ ಮಾರಿಕಾಂಬ ಜಾತ್ರೆ
ಶಿರಸಿಯಲ್ಲಿ ನಡೆಯುತ್ತಿರುವ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಹಾಗೂ ರೌಡಿಶೀಟರ್ಗಳ ಪರೇಡ್ ನಡೆಸಲಾಯಿತು.
ರೌಡಿ ಪರೇಡ್
ಉಪವಿಭಾಗದ ಡಿಎಸ್ಪಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಸರಗಳ್ಳತನ, ಮನೆ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಠಾಣೆಗೆ ಕರೆಸಿ, ಜಾತ್ರೆ ಸಂದರ್ಭದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಸೂಚನೆ ನೀಡಲಾಯಿತು.
ಯಾವುದೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದರೆ ಅಥವಾ ಗಲಭೆ ಸೃಷ್ಟಸಿ ಶಾಂತಿ ಕದಡುವ ಕೃತ್ಯಕ್ಕೆ ಕೈಹಾಕಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.