ಕಾರವಾರ:ಚಂಡೀಗಢದಲ್ಲಿ ಮಾರ್ಚ್ 31ರಿಂದ ಏಪ್ರಿಲ್ 11ರವರೆಗೆ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ಶಿಪ್ ನಡೆಯಲಿದೆ. ಇದಕ್ಕಾಗಿ ರಾಜ್ಯದಿಂದ ವಿವಿಧ ವಿಭಾಗಗಳಿಂದ ಐದು ತಂಡಗಳ ಆಯ್ಕೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ತರಬೇತಿ ನೀಡಿ, ತಂಡಗಳನ್ನು ಸಜ್ಜು ಮಾಡಲಾಗಿದೆ.
ಕೈಗಾದಲ್ಲಿ ಸ್ಪರ್ಧಿಗಳಿಗೆ ತರಬೇತಿ ಕಠಿಣ ತರಬೇತಿಯೊಂದಿಗೆ ಮಕ್ಕಳು ಸಿದ್ಧತೆ ನಡೆಸಿದ್ದು, ಇಂತಹ ಕ್ರೀಡೆಗೆ ಕಳೆದ ಕೆಲ ವರ್ಷಗಳಿಂದ ಕೈಗಾದಲ್ಲಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿನ ತರಬೇತುದಾರರು ಆಸಕ್ತಿಯುಳ್ಳ ಸ್ಕೇಟರ್ಗಳನ್ನು ಹುಡುಕಿ ತರಬೇತಿ ನೀಡುತ್ತಿದ್ದಾರೆ.
ಚಂಡೀಗಢದಲ್ಲಿ ನಡೆಯಲಿರುವ ಚಾಂಪಿಯನ್ಶಿಪ್ನಲ್ಲಿ ಒಟ್ಟು 22 ರಾಜ್ಯದ ಸ್ಕೇಟಿಂಗ್ ತಂಡಗಳು ಭಾಗವಹಿಸಲಿವೆ. ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಸ್ಪರ್ಧಿಗಳು ಕಠಿಣ ಅಭ್ಯಾಸ ನಡೆಸಿದ್ದು ಉತ್ತಮ ರೀತಿಯಲ್ಲಿ ತರಬೇತಿ ನೀಡಿದ್ದಾರೆ ಪಡೆದಿದ್ದಾರೆ.
ಇದನ್ನೂ ಓದಿ:ಸಿದ್ದು ಭೇಟಿಯಾದ ಮಸ್ಕಿ ಕಾಂಗ್ರೆಸ್ ಮುಖಂಡರು; ಚುನಾವಣಾ ರೂಪುರೇಷೆ ಚರ್ಚೆ
ಸ್ಕೇಟಿಂಗ್ನಲ್ಲಿ ಪಳಗಿದ ರಾಜ್ಯದ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಇದೀಗ ಚಂಡೀಗಢದಲ್ಲಿ ನಡೆಯಲಿರುವ ಸ್ಕೇಟಿಂಗ್ ರೋಲರ್ ಹಾಕಿ ಚಾಂಪಿಯನ್ ಶಿಪ್ಗೆ ಸಜ್ಜಾಗಿದ್ದಾರೆ. ಮಕ್ಕಳು ಉತ್ತಮ ಪ್ರದರ್ಶನದ ಜೊತೆಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂಬ ಹಾರೈಕೆ ಎಲ್ಲರದ್ದು.