ಕರ್ನಾಟಕ

karnataka

ETV Bharat / state

ರಸ್ತೆ ಸುರಕ್ಷತೆ ಜಾಗೃತಿಗಾಗಿ ರಸ್ತೆಗಿಳಿದ ಯಮ: ಶಿರಸಿ ಪೊಲೀಸರಿಂದ ವಿನೂತನ ಪ್ರಯತ್ನ - Crime prevention awareness in Shirshi

ಶಿರಸಿಯಲ್ಲಿ ಯಮನ ವೇಷ ತೊಟ್ಟ ಕಲಾವಿದರು ವಾಹನ ಸವಾರರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದರು.

Road safety awareness by Shirshi police
ರಸ್ತೆ ಸುರಕ್ಷತೆ ಜಾಗೃತಿಗಾಗಿ ರಸ್ತೆಗಿಳಿದ ಯಮ

By

Published : Nov 23, 2020, 6:57 PM IST

ಶಿರಸಿ :ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಶಿರಸಿ ಪೊಲೀಸರಿಂದ ವಿನೂತನ ಜಾಗೃತಿ ಅಭಿಯಾನ ನಡೆಯಿತು.

ಸ್ಥಳೀಯ ಕಲಾವಿದರು ಯಮನ ವೇಷ ಧರಿಸಿ ವಾಹ‌ನ ಸವಾರರಿಗೆ ಎಚ್ಚರಿಕೆ ನೀಡಿದರು. ಗಂಡು ಕಲೆ ಯಕ್ಷಗಾನದ ವೇಷ ತೊಟ್ಟ ಯಮ ಹಾಗೂ ಯಮಕಿಂಕರರು ಹೆಲ್ಮೆಟ್ ಇಲ್ಲದ ವಾಹನ ಸವಾರರನ್ನು ತಡೆದು ಯಮಶಾಪ​ ಹಾಕುವಂತೆ ಅಣಕು ಜಾಗೃತಿ ನಡೆಸಿದರು. ಶಿರಸಿಯ ಬಿಡ್ಕಿಬೈಲ್ ಸೇರಿದಂತೆ ನಗರದ ಹಲವು ಪ್ರಮುಖ ವೃತ್ತಗಳಲ್ಲಿ ಈ ಜಾಗೃತಿ ಕಾರ್ಯ ನಡೆಯಿತು.

ರಸ್ತೆ ಸುರಕ್ಷತೆ ಜಾಗೃತಿಗಾಗಿ ರಸ್ತೆಗಿಳಿದ ಯಮ

ಸ್ಥಳೀಯ ಕಲಾವಿದ ಮಂಜುನಾಥ ಶೇಟ್ ಯಮನ ಪಾತ್ರ ನಿರ್ವಹಿಸಿದ್ದರು. ಇಂದು ರಸ್ತೆ ಸುರಕ್ಷಾ ಮಾಸಾಚರಣೆಯಾದ್ದರಿಂದ ವಾಹನ ಸವಾರರಿಗೆ ಯಾವುದೇ ರೀತಿಯ ದಂಡ ವಿಧಿಸಿರಲಿಲ್ಲ. ಈ ಹಿಂದೆ ಕೊರೊನಾ ಜಾಗೃತಿಯಲ್ಲೂ ಹೆಚ್ಚಿನ ಮುತುವರ್ಜಿವಹಿಸಿ ಹಲವು ವಿನೂತನ ಜಾಗೃತಿ ಕಾರ್ಯಕ್ರಮಗಳ ಮೂಲಕ ಶಿರಸಿ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ABOUT THE AUTHOR

...view details