ಕಾರವಾರ: ಐವರು ಕೊರೊನಾ ಸೋಂಕಿತರನ್ನು ಪಿಪಿಇ ಕಿಟ್ ಹಾಕಿ ಆಸ್ಪತ್ರೆಗೆ ಕಳುಹಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ.. ಕಾರವಾರದಲ್ಲಿ ಸೋಂಕಿತರನ್ನು ಕಳುಹಿಸಲು ಸ್ಥಳೀಯರ ವಿರೋಧ - ಕಾರವಾರದಲ್ಲಿ ಕೊರೊನಾ ಪ್ರಕರಣ
ನಗರದ ಕೆಇಬಿ ಬಳಿಯ ಕೋಣೆವಾಡದಲ್ಲಿ ಕ್ವಾರಂಟೈನ್ ಆಗಿದ್ದ ಐವರಿಗೆ ಸೋಂಕು ಪತ್ತೆಯಾಗಿತ್ತು. ಇದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲಿ ಸೋಂಕಿತರಿಗೆ ಪಿಪಿಇ ಕಿಟ್ ಧರಿಸಲು ಸೂಚಿಸಿದ್ದರು..
ನಗರದ ಕೆಇಬಿ ಬಳಿಯ ಕೋಣೆವಾಡದಲ್ಲಿ ಕ್ವಾರಂಟೈನ್ ಆಗಿದ್ದ ಐವರಿಗೆ ಸೋಂಕು ಪತ್ತೆಯಾಗಿತ್ತು. ಇದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಆ್ಯಂಬುಲೆನ್ಸ್ನಲ್ಲಿ ಸೋಂಕಿತರಿಗೆ ಪಿಪಿಇ ಕಿಟ್ ಧರಿಸಲು ಸೂಚಿಸಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುವುದಿಲ್ಲ. ಒಬ್ಬ ಡಾಕ್ಟರ್ ಸಹ ಬಂದು ನೋಡುವುದಿಲ್ಲ. ಅಲ್ಲದೆ ಊಟ ತಿಂಡಿ ಕೂಡ ಸರಿಯಾಗಿ ನೀಡುವುದಿಲ್ಲ. ನಾವು ಯಾವುದೇ ಕಾರಣಕ್ಕೂ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಸೋಂಕಿನಿಂದ ಗುಣಮುಖರಾಗಿದ್ದ ವ್ಯಕ್ತಿಯೋರ್ವ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸ್ಥಳೀಯರು ಸಹ ಇದಕ್ಕೆ ಸಾಥ್ ನೀಡಿ ಮನೆಯಲ್ಲಿಯೇ ಕ್ವಾರಂಟೈನ್ ಇರುವುದಾಗಿ ಪಟ್ಟು ಹಿಡಿದಿದ್ದರು. ಬಳಿಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರ ಕಾಲಿಗೆ ಬೀಳಲು ಮುಂದಾದ ಸ್ಥಳೀಯರು ಸಭಾಭವನದಲ್ಲಿ ಇರಲು ಅವಕಾಶ ನೀಡುವಂತೆ ಕೋರಿದರು. ಕೊನೆಗೆ ಸಿಪಿಐ ಸಂತೋಷ್ ಶೆಟ್ಟಿ ಕೋವಿಡ್ ನಿಯಮದಂತೆ ಆಸ್ಪತ್ರೆ ಇಲ್ಲವೇ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಬೇಕು. ಸಣ್ಣ ಮಕ್ಕಳಿದ್ದರೇ ಓರ್ವ ಪಾಲಕರಿಗೆ ಅವಕಾಶ ನೀಡುವುದಾಗಿ ತಿಳಿಸಿ ಮನವೊಲಿಸಿದರು. ಕೊನೆಗೆ ಪಿಪಿಇ ಕಿಟ್ ಧರಿಸಲು ಒಪ್ಪದಿದ್ದಾಗ ಸೋಂಕಿತರನ್ನು ಹಾಗೆಯೇ ಕರೆದೊಯ್ದಿದ್ದಾರೆ.