ಕಾರವಾರ: ಪ್ರವಾಸಕ್ಕೆ ಬಂದು ಈಜಲು ಇಳಿದಿದ್ದ ಇಬ್ಬರು ಪ್ರವಾಸಿಗರನ್ನು ಲೈಪ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಘಟನೆ ಹೊನ್ನಾವರದ ಕಾಸರಕೋಡ್ ಇಕೋ ಬೀಚ್ನಲ್ಲಿ ನಡೆದಿದೆ.
ಕಾರವಾರದ ಇಕೋ ಬೀಚ್ನಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ - Rescue of two person
ಮಂಜುಳಾ ಬಿರಾದಾರ ಮತ್ತು ಲಕ್ಷ್ಮಣ ಬಿರಾದಾರ ಸಮುದ್ರದಲ್ಲಿ ಇಳಿದು ಆಟ ಆಡುತ್ತಿರುವಾಗ ಕೊಚ್ಚಿ ಹೊಗುತ್ತಿದ್ದರು. ತಕ್ಷಣವೇ ಅವರನ್ನು ಲೈಪ್ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಇಕೋ ಬೀಚ್ನಲ್ಲಿ ಸಮುದ್ರಪಾಲಾಗುತ್ತಿದ್ದ ಇಬ್ಬರ ರಕ್ಷಣೆ
ಮಹಾಲಯ ಅಮಾವಾಸ್ಯೆಯ ರಜೆ ಹಿನ್ನಲೆ ಬಾಗಲಕೋಟೆಯಿಂದ ಆಗಮಿಸಿದ 13 ಮಂದಿ ಪ್ರವಾಸಿಗರ ತಂಡದಲ್ಲಿದ್ದ ಮಂಜುಳಾ ಬಿರಾದಾರ ಮತ್ತು ಲಕ್ಷ್ಮಣ ಬಿರಾದಾರ ಸಮುದ್ರದಲ್ಲಿ ಇಳಿದು ಆಟ ಆಡುತ್ತಿರುವಾಗ ಕೊಚ್ಚಿ ಹೋಗುತ್ತಿದ್ದರು.
ಕೂಡಲೇ ರಕ್ಷಣೆಗೆ ಧಾವಿಸಿದ ಲೈಫ್ ಗಾರ್ಡ್ಗಳಾದ ಯಶವಂತ ಮಾದೇವ ಹರಿಕಂತ್ರ, ವಿರೇಂದ್ರ ಬಾಬು ಅಂಬಿಗ, ಸುಬ್ರಾಯ ತಾಂಡೇಲ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ನಂತರ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.