ಭಟ್ಕಳ/ಉತ್ತರ ಕನ್ನಡ: ನಗರದ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಶಂಕಿತ ಯುವಕನ ವರದಿ ಕೂಡ ನೆಗೆಟಿವ್ ಎಂದು ಬಂದಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ. ಇದರೊಂದಿಗೆ ಭಟ್ಕಳ ತಾಲೂಕಿನ ಮೂವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಯಾರಲ್ಲಿಯೂ ಕೂಡ ಸೋಂಕು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಭಟ್ಕಳದಲ್ಲಿ ಮೂವರು ಕೊರೊನಾ ಶಂಕಿತರ ವರದಿ ನೆಗೆಟಿವ್ - ಭಟ್ಕಳದಲ್ಲಿ ಮೂವರು ಕೊರೊನಾ ಶಂಕಿತರ ವರದಿಗಳು ನೆಗೆಟಿವ್
ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಶಂಕಿತ ಯುವಕನ ವರದಿ ಕೂಡ ನೆಗೆಟಿವ್ ಎಂದು ಬಂದಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.
ಇದುವರೆಗೂ ಪರೀಕ್ಷೆಗೆ ಒಳಗಾದವರಲ್ಲಿ ಇಬ್ಬರು ದುಬೈ ಹಾಗೂ ಮತ್ತೊಬ್ಬರು ಬ್ಯಾಂಕಾಕ್ನಿಂದ ಬಂದವರಾಗಿದ್ದಾರೆ. ಕೊರೊನಾ ಭೀತಿ ಹಾಗೂ ನಿಷೇಧಾಜ್ಞೆ ಹಿನ್ನೆಲೆ ತಾಲೂಕಿನಲ್ಲಿ ಜನ ಸಂಚಾರ ವಿರಳವಾಗಿದೆ. ಪ್ರಯಾಣಿಕರ ಕೊರತೆಯಿಂದ ಕೆಲವು ಗ್ರಾಮೀಣ ಮಾರ್ಗದ ಬಸ್ಗಳನ್ನು ರದ್ದು ಮಾಡಲಾಗಿದೆ. ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲಿ ವಿದೇಶದಿಂದ ಬರುವ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ತಾಲೂಕಾಡಳಿತ ಎಲ್ಲೆಡೆ ಜಾಗೃತಿ ಮೂಡಿಸುತ್ತಿದೆ.
ಕೋಳಿ ವ್ಯಾಪಾರಸ್ಥರು ಕಂಗಾಲು: ಕೊರೊನಾ ವೈರಸ್ ಬರುವ ಮೊದಲು ಕೋಳಿ ದರ ಕೆಜಿಗೆ ನೂರರಿಂದ 120 ರೂ. ಇತ್ತು. ಆದೆ ಈದೀಗ ಕೆಜಿಗೆ 30 ರೂ. ತಲುಪಿದ್ದು, ವ್ಯಾಪಾರ ತುಂಬಾ ಕಡಿಮೆಯಾಗಿದೆ. ಇದರಿಂದ ಕೋಳಿ ಮಾರಾಟವೂ ಆಗದೆ ಕೋಳಿಗಳನ್ನು ಕೊಲ್ಲುವುದಕ್ಕೂ ಆಗದೆ ಕೋಳಿ ವ್ಯಾಪಾರಸ್ಥರು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.