ಶಿರಸಿ: ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಯಾದ ಪಟ್ಟಾ ಸಹಿತ ಮನೆಗಳಿಗೆ ಈಗಾಗಲೇ ಪರಿಹಾರದ ಹಣ ಬಿಡುಗಡೆಯಾಗಿದ್ದು, ಅತಿಕ್ರಮಣ ಮನೆಗಳಿಗೆ ಮುಂದಿನ ಒಂದು ವಾರದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಶಿರಸಿ ತಾಲೂಕಾ ಆಡಳಿತ ಸ್ಪಷ್ಟಪಡಿಸಿದೆ.
ಹಾನಿಗೀಡಾದ ಮನೆ ಮಾಲೀಕರಿಗೆ ಒಂದು ವಾರದಲ್ಲಿ ಪರಿಹಾರ: ಶಿರಸಿ ತಾಲೂಕು ಆಡಳಿತ - ಶಿರಸಿ ಪ್ರವಾಹ ಸಣತ್ರಸ್ಥರಿಗೆ ಪರಿಹಾರ
ಶಿರಸಿಯಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಒಂದು ವಾರದಲ್ಲಿ ಹಣ ಬಿಡುಗಡೆ ಎಂದು ಶಿರಸಿ ತಾಲೂಕಾ ಆಡಳಿತ ಮಾಹಿತಿ ನೀಡಿದೆ.
ಈ ಟಿವಿ ಭಾರತದಲ್ಲಿ ಪ್ರಕಟವಾದ ನೆರೆ ಪರಿಹಾರ ಬಂದಿಲ್ಲ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ನೆರೆ ಸಂದರ್ಭದಲ್ಲಿ ಬಿದ್ದ ಮನೆಗಳನ್ನು ಎ, ಬಿ ಮತ್ತು ಸಿ ಕೆಟಗರಿ ಮಾಡಲಾಗಿದೆ. ಅವುಗಳಲ್ಲಿ ಪಟ್ಟಾ ಹೊಂದಿರುವ ಅಧಿಕೃತ ಮನೆಗಳಿಗೆ ಮೂರು ಕೆಟಗರಿಯಲ್ಲಿ ಹಣ ಬಿಡುಗಡೆಯಾಗಿದೆ. ಇನ್ನು ಅತಿಕ್ರಮಣ ವಾಸಿಗಳಿಗೆ ಎ ಮತ್ತು ಬಿ ಕೆಟಗರಿಗೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ವತಿಯಿಂದ ಮುಂದಿನ ಒಂದು ವಾರದಲ್ಲಿ ಪರಿಹಾರ ಬಿಡುಗಡೆ ಆಗಲಿದ್ದು, ಸಿ ಕೆಟಗರೆ ಮನೆಗಳಿಗೆ ತಹಶೀಲ್ದಾರ್ ವತಿಯಿಂದ ಸೋಮವಾರ ಅಥವಾ ಮಂಗಳವಾರ ಹಣ ಹಾಕಲಾಗುತ್ತದೆ ಎಂದು ತಿಳಿಸಿದ್ದರೆ.
ಶಿರಸಿ ತಾಲೂಕಿನಲ್ಲಿ 62 ಅತಿಕ್ರಮಣ ಮನೆಗಳಿಗೆ ಪರಿಹಾರ ಬಿಡುಗಡೆ ಆಗಬೇಕಿದೆ. 6 ಎ ಕೆಟಗರಿ, 20 ಬಿ ಹಾಗೂ 26 ಸಿ ಕೆಟಗರಿ ಮನೆಗಳಿಗೆ ಹಣ ಬಿಡಿಗಡೆಯಾಗಬೇಕಿದೆ. ಸಿ ಕೆಟಗರಿಗೆ 25 ಸಾವಿರ ರೂ. ಬಿಡುಗಡೆಯಾಗಲಿದ್ದು, ತಹಶೀಲ್ದಾರ್ ಖಾತೆಯಿಂದ ನೇರವಾಗಿ ಫಲಾನುಭವಿಗಳಿಗೆ ಸಿಗಲಿದೆ ಎಂದರು.