ಕರ್ನಾಟಕ

karnataka

ETV Bharat / state

ಹೆಬ್ಬಾರ್ ಕ್ಷೇತ್ರಕ್ಕೆ ಭರ್ಜರಿ ಅನುದಾನ ಬಿಡುಗಡೆ: ಚಿಗಳ್ಳಿ ಡ್ಯಾಂ ಮರು ಅಭಿವೃದ್ಧಿ - sirsi Chingali Dam Redevelopment news

ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ಸರ್ಕಾರದಿಂದ ಭರಪೂರ ಅನುದಾನ ದೊರಕುತ್ತಿದ್ದು, ಮುಂಡಗೋಡಿನ ಚಿಗಳ್ಳಿ ಡ್ಯಾಂ ಪುನರುಜ್ಜೀವನ ಕಾಮಗಾರಿಗೆ 9 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.

Chingali Dam
ಚಿಗಳ್ಳಿ ಡ್ಯಾಂ ಮರುಅಭಿವೃದ್ಧಿ

By

Published : Jan 13, 2020, 8:18 PM IST

ಶಿರಸಿ: ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕ್ಷೇತ್ರಕ್ಕೆ ಸರ್ಕಾರದಿಂದ ಭರಪೂರ ಅನುದಾನ ದೊರಕುತ್ತಿದ್ದು, ಮುಂಡಗೋಡಿನ ಚಿಗಳ್ಳಿ ಡ್ಯಾಂ ಪುನರುಜ್ಜೀವನ ಕಾಮಗಾರಿಗೆ 9 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.

ಚಿಗಳ್ಳಿ ಡ್ಯಾಂ ಮರುಅಭಿವೃದ್ಧಿಗೆ ಅನುದಾನ ಬಿಡುಗಡೆ

ಕಾಂಗ್ರೆಸ್​ನಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರ ಬರಲು ಕಾರಣರಾಗಿರುವ ಹೆಬ್ಬಾರ್ ಕ್ಷೇತ್ರಕ್ಕೆ ಸರ್ಕಾರದಿಂದ ಭರ್ಜರಿ ಅನುದಾನ ಬಿಡುಗಡೆಯಾಗುತ್ತಿದ್ದು, ಕಳೆದ ಮಳೆಗಾದಲ್ಲಿ ಒಡೆದಿದ್ದ ಚಿಗಳ್ಳಿ ಡ್ಯಾಂ ಅಭಿವೃದ್ಧಿಗೆ ಹಣ ಮಂಜೂರಾಗಿ ಕಾಮಗಾರಿ ಟೆಂಡರ್ ಹಂತದಲ್ಲಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸುಮಾರು 9 ಕೋಟಿ ರೂ. ವಿಶೇಷ ಅನುದಾನ ಮಂಜೂರು ಆಗಿದೆ. ಇದಲ್ಲದೇ ಕ್ಷೇತ್ರದ ರಸ್ತೆ ಅಭಿವೃದ್ಧಿಗೂ ಸುಮಾರು 145 ಕೋಟಿ ರೂ. ಬಿಡುಗಡೆಯಾಗಿದ್ದು, ಬಿಜೆಪಿ ಸೇರಿದ ಮೇಲೆ ಹೆಬ್ಬಾರ್ ಕ್ಷೇತ್ರ ಲಾಟರಿ ಹೊಡೆದಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

ABOUT THE AUTHOR

...view details