ಕಾರವಾರ:ಕಳೆದ 40 ದಿನಗಳಿಂದ ಮದ್ಯವಿಲ್ಲದೆ ಕಂಗೆಟ್ಟಿದ್ದ ಮದ್ಯಪ್ರಿಯರಿಗೆ ಸರ್ಕಾರ ನಾಳೆಯಿಂದ ಮದ್ಯ ನೀಡಲು ಮುಂದಾಗಿದ್ದು, ಕಾರವಾರದಲ್ಲಿ ಅಬಕಾರಿ ಇಲಾಖೆ ಮದ್ಯ ಮಾರಾಟದ ಅಂಗಡಿಗಳ ಮುಂದೆ ಮಾರ್ಕ್ ಮಾಡಿ ಸಿದ್ಧತೆ ನಡೆಸಿದೆ.
ಕಾರವಾರದಲ್ಲಿ ಅಬಕಾರಿ ಇಲಾಖೆಯಿಂದ ಸಿದ್ಧತೆ ಹೌದು, ಲಾಕ್ಡೌನ್ನಿಂದಾಗಿ ಮಾರ್ಚ್ 24 ರಿಂದ ಬಂದಾಗಿದ್ದ ಮದ್ಯದ ಅಂಗಡಿಗಳನ್ನು ಸರ್ಕಾರ ಮೇ 4 ರಿಂದ ತೆರೆಯಲು ಒಪ್ಪಿಗೆ ಸೂಚಿಸಿವೆ. ಎಂಎಸ್ಐಎಲ್ ಮತ್ತು ವೈನ್ ಶಾಪ್ ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಕಾರವಾರದಲ್ಲಿ ಇಂದು ಮದ್ಯದ ಅಂಗಡಿಗಳ ಮುಂದೆ ಅಬಕಾರಿ ಇಲಾಖೆ ಮದ್ಯ ಖರೀದಿಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಿದೆ.
ಕೇವಲ ಎಂಎಸ್ಐಎಲ್ ಮತ್ತು ವೈನ್ ಶಾಪ್ಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾರವಾರದಲ್ಲಿ ಸ್ವತಃ ಅಬಕಾರಿ ಇಲಾಖೆ ಅಧಿಕಾರಿಗಳ ಸುವರ್ಣಾ ನಾಯ್ಕ ನೇತೃತ್ವದ ತಂಡ ಮದ್ಯದ ಅಂಗಡಿಗಳ ಎದುರು ಅಳತೆ ಮಾಡಿ ಸರ್ಕಲ್ಗಳನ್ನು ಹಾಕಿಸಿದ್ದಾರೆ.
ದೀರ್ಘ ಸಮಯದ ನಂತರ ಮತ್ತೆ ಬಾಗಿಲು ತೆಗೆಯುತ್ತಿದ್ದು ಮದ್ಯ ಪ್ರಿಯರಿಗೆ ಖುಷಿಗೆ ಕಾರಣವಾಗಿದೆ. ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಶಾಪ್ ತೆರೆಯಲು ಅವಕಾಶ ನೀಡಲಾಗಿದ್ದು, 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಅಂಗಡಿಗಳಲ್ಲಿ 5 ಜನರಿಗೆ ಮಾತ್ರ ಪ್ರವೇಶಾವಕಾಶವಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.