ಕಾರವಾರ (ಉ.ಕ): ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನದ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಜಗಲಬೇಟದಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ನೀರವ ಮೌನ ಆವರಿಸಿದೆ.
ರವಿ ಬೆಳಗೆರೆ ನಿಧನ: ಜೋಯಿಡಾದ ಫಾರ್ಮ್ಹೌಸ್ನಲ್ಲಿ ನೀರವ ಮೌನ - ರವಿ ಬೆಳೆಗೆರೆ ಅಂತ್ಯಕ್ರಿಯೆ
ಕಳೆದ ಕೆಲ ವರ್ಷಗಳಿಂದ ಜಗಲಬೇಟದಲ್ಲಿ ಫಾರ್ಮ್ಹೌಸ್ ಮಾಡಿಕೊಂಡಿದ್ದ ರವಿ ಬೆಳಗೆರೆ ಇಲ್ಲಿಗೆ ಬಂದು ಪೃಕೃತಿ ಸೌಂದರ್ಯದ ನಡುವೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ತಮ್ಮ ಆತ್ಮೀಯರ ಜತೆ ಮಾತುಕತೆ ನಡೆಸುತ್ತಿದ್ದರು. ಆದರೆ ಈ ಫಾರ್ಮ್ಹೌಸ್ನಲ್ಲೀಗ ಮೌನ ಆವರಿಸಿದೆ.
ರವಿ ಬೆಳಗೆರೆ ನಿಧನದಿಂದ ಫಾರ್ಮ್ಹೌಸ್ನಲ್ಲಿ ನೀರವ ಮೌನ
ಕಳೆದ ಕೆಲ ವರ್ಷಗಳಿಂದ ಜಗಲಬೇಟದಲ್ಲಿ ಫಾರ್ಮ್ಹೌಸ್ ಮಾಡಿಕೊಂಡಿದ್ದ ರವಿ ಬೆಳಗೆರೆ ಇಲ್ಲಿಗೆ ಬಂದು ಪೃಕೃತಿ ಸೌಂದರ್ಯದ ನಡುವೆಯೇ ಸಾಕಷ್ಟು ಹೊತ್ತು ಕಾಲ ಕಳೆಯುತ್ತಿದ್ದರು. ಅಲ್ಲದೆ ಅವರ ಅದೆಷ್ಟೊ ಪುಸ್ತಕಗಳನ್ನು ಇಲ್ಲಿಯೇ ಬರೆಯಲು ಒಳ್ಳೆಯ ವಾತಾವರಣ ಇದೆ ಎಂಬುದಾಗಿ ಹೇಳಿಕೊಂಡಿದ್ದರು. ಜತೆಗೆ ಆತ್ಮೀಯರನ್ನು ಇಲ್ಲಿಗೆ ಕರೆಸಿಕೊಂಡು ಮಾಹಿತಿ ಪಡೆಯುತ್ತಿದ್ದರು.
ಆದರೆ ಕಳೆದ ಲಾಕ್ಡೌನ್ ಬಳಿಕ ರವಿ ಬೆಳಗೆರೆ ಇತ್ತ ಕಡೆ ಆಗಮಿಸಿರಲಿಲ್ಲ. ಇದೀಗ ಇಹಲೋಕ ತ್ಯಜಿಸಿರುವುದರಿಂದ ಅವರ ಫಾರ್ಮ್ಹೌಸ್ನಲ್ಲಿ ಸ್ಮಶಾನಮೌನ ಆವರಿಸಿದೆ.