ಕಾರವಾರ:ಕೊರೊನಾ ಲಾಕ್ಡೌನ್ ಬಳಿಕ ಇದೀಗ ಉತ್ತರಕನ್ನಡದಲ್ಲಿ ಮೀನುಗಾರಿಕೆ ಆರಂಭವಾಗಿದೆ. ಇದರ ನಡುವೆಯೇ ಸಮುದ್ರದಲ್ಲಿ ಅಪರೂಪದ ಜಲಚರಗಳು ಸಾವನ್ನಪ್ಪುತ್ತಿವೆ. ಇದು ಕಡಲಜೀವಶಾಸ್ತ್ರಜ್ಞರ ಆತಂಕಕ್ಕೆ ಕಾರಣವಾಗಿದೆ.
ಈವರೆಗೆ ಸ್ವಚ್ಛಂದವಾಗಿದ್ದ ಕಡಲ ಜೀವಿಗಳೀಗ ಮೀನುಗಾರಿಕೆ ಆರಂಭ ಆದಾಗಿನಿಂದ ಬಲೆಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ. ಕಳೆದ 15 ದಿನದ ಅಂತರದಲ್ಲಿ ಕಾರವಾರದ ಸಮುದ್ರತೀರದಲ್ಲಿ ಒಂದಾದ ಮೇಲೊಂದರಂತೆ ಕಡಲಜೀವಿಗಳು ಸಾವನ್ನಪ್ಪಿವೆ. ಅಪರೂಪದ ಹವಾಕ್ಸ್ ಬುಲ್ ಟರ್ಟಲ್ ಸೇರಿ ಮೂರು ಕಡಲಾಮೆ ಹಾಗೂ ಒಂದು ಹಂಪ್‌ಬ್ಯಾಕ್ ಡಾಲ್ಫಿನ್ ಕಳೆಬರ ಕಡಲತೀರಕ್ಕೆ ಬಂದು ಬಿದ್ದಿವೆ.
ಹಂಪ್‌ಬ್ಯಾಕ್ ಡಾಲ್ಫಿನ್ ಕಳೆಬರ ಅರಬ್ಬೀ ಸಮುದ್ರ ಪ್ರದೇಶದಲ್ಲಿ ಅಪರೂಪದ ಹಂಪ್ ಬ್ಯಾಕ್ ಡಾಲ್ಫಿನ್ ಹಾಗೂ ಗ್ರೀನ್ ಕಡಲಾಮೆ ಪ್ರಭೇದಗಳು ಕಂಡು ಬಂದಿವೆ. ಇದೇ ಮೊದಲ ಬಾರಿಗೆ ಅಂಡಮಾನ್-ನಿಕೋಬಾರ್ ಪ್ರದೇಶದಲ್ಲಿ ಕಾಣ ಸಿಗುವ ವಿಶೇಷ ಪ್ರಭೇದದ ಹವಾಕ್ಸ್ ಬಿಲ್ ಆಮೆಗಳು ಇರುವುದು ಕಳೆಬರದಿಂದ ತಿಳಿದು ಬಂದಿದೆ.
ಅಪರೂಪದ ಕಡಲಜೀವಿಗಳು ಕಾಣ ಸಿಗುವುದೇ ಅಪರೂಪ. ಆದರೆ, ಒಂದರ ಮೇಲೊಂದರಂತೆ ಸಾವನ್ನಪ್ಪುತ್ತಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನಹರಿಸಿ ಕಡಲಜೀವಿಗಳ ಸಂತತಿ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕಿದೆ.
ಓದಿ: ಅಂತರ್ಜಲ, ಅರಣ್ಯ ಅಭಿವೃದ್ಧಿಗೆ ಸಹಕಾರಿ.. ನೂರಾರು ಜನರ ತುತ್ತಿನ ಚೀಲ ತುಂಬಿಸಿದ ಎಂಜಿನಿಯರ್ ಐಡಿಯಾ..