ಶಿರಸಿ: ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚರಕ್ಕೆ ಯತ್ನಿಸಿ,ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನಲ್ಲಿ ನಡೆದಿದೆ.
ಶಿರಸಿಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಥಳಿತ - rape attempt
ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಕಾಮುಕನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಸಾರ್ವಜನಿಕರಿಂದ ಒದೆ ತಿಂದು ನಂತರ ಪೊಲೀಸರ ಅತಿಥಿಯಾದ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನಲ್ಲಿ ನಡೆದಿದೆ.
ಮಂಜಗುಣಿಯ ಪ್ರಕಾಶ ಚಂದು ಮರಾಠಿ (24) ಬಂಧಿತ ಆರೋಪಿ. ವಿದ್ಯಾರ್ಥಿನಿ ಎಂದಿನಂತೆ ಕಾಲೇಜು ಮುಗಿಸಿಕೊಂಡು ಅರಣ್ಯ ಪ್ರದೇಶದ ರಸ್ತೆಯಲ್ಲಿ ಮನೆಗೆ ನಡೆದು ಸಾಗುತಿದ್ದಾಗ ಆರೋಪಿ ಅವಳ ಹಿಂದೆ ಹೋಗಿ ಯಾರೂ ಇಲ್ಲದಿರುವದನ್ನು ಗಮನಿಸಿ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚೀರಿಕೊಂಡಿದ್ದಾಳೆ. ಚೀರಾಟದ ಶಬ್ದ ಅದೇ ರಸ್ತೆಯಿಂದ ಸಾಗುತಿದ್ದ ವ್ಯಕ್ತಿಯೋರ್ವರಿಗೆ ಕೇಳಿಸಿದ್ದು, ತಕ್ಷಣ ವಿದ್ಯಾರ್ಥಿನಿ ನೆರವಿಗೆ ಬಂದು ಕಾಪಾಡಿದ್ದಾರೆ.
ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದರಿಂದ ಸ್ಥಳಕ್ಕೆ ಬಂದ ಗ್ರಾಮಸ್ಥರು ಪ್ರಕಾಶನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.