ಕೊಪ್ಪಳ/ಮೈಸೂರು :ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ವರುಣ ಕೆಲವೆಡೆ ಅವಾಂತರ ಸೃಷ್ಟಿಸಿದ್ದಾನೆ. ಕೊಪ್ಪಳದಲ್ಲಿ ಬ್ಯಾರೇಜ್ ಒಡೆದು ಹೋಗಿದ್ದು, ಮೈಸೂರಿನಲ್ಲಿ ವಿದ್ಯುತ್ ಕಂಬ ಹಾಗೂ ಮರ ಧರೆಗುರುಳಿವೆ.
ನಿನ್ನೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಕೊಪ್ಪಳ ತಾಲೂಕಿನ ಡೊಂಬ್ರಳ್ಳಿ ಗ್ರಾಮದ ಬಳಿಯ ಬ್ಯಾರೇಜ್ನ ಒಂದು ಭಾಗ ಒಡೆದು ಹೋಗಿದೆ. ಡೊಂಬ್ರಳ್ಳಿ ಹಾಗೂ ಗೊಂಡಬಾಳ ನಡುವೆ ಇರುವ ಹಿರೇಹಳ್ಳದಲ್ಲಿ ಈ ಬ್ಯಾರೇಜ್ ನಿರ್ಮಿಸಲಾಗಿದೆ. ನೀರಿನ ರಭಸಕ್ಕೆ ಬ್ಯಾರೇಜ್ನ ಒಂದು ಭಾಗ ಒಡೆದು ಹೋಗಿದ್ದು, ರೈತರ ಹೊಲಕ್ಕೆ ನೀರು ನುಗ್ಗಿದೆ.