ಕರ್ನಾಟಕ

karnataka

ETV Bharat / state

ಬಿಳಲಖಂಡ ಗ್ರಾಮದಲ್ಲಿ ಹದಗೆಟ್ಟ ರಸ್ತೆ: ದುರಸ್ತಿಗೆ ಸಾರ್ವಜನಿಕರ ಆಗ್ರಹ

ಭಟ್ಕಳ ತಾಲೂಕಿನ ಬಿಳಲಖಂಡ ಗ್ರಾಮದ ಹೆದ್ದಾರಿ 66ರ ವರೆಗಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ದುರಸ್ತಿ ಮಾಡುತ್ತಿರುವ ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು

By

Published : Nov 3, 2019, 12:01 PM IST

ಉತ್ತರಕನ್ನಡ:ಭಟ್ಕಳ ತಾಲೂಕಿನ ಬಿಳಲಖಂಡ ಗ್ರಾಮದ ಹೆದ್ದಾರಿ 66ರ ವರೆಗಿನ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಸ್ತೆ ದುರಸ್ತಿ ಮಾಡುತ್ತಿರುವ ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು

ಈ ಬಗ್ಗೆ ಮುಠ್ಠಳ್ಳಿ ಗ್ರಾಮ ಪಂಚಾಯತಿ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರೂ ಕೂಡ ಗಮನ ಹರಿಸದ ಕಾರಣ, ಭಟ್ಕಳ ಅಲ್​-ಬಿಲಾಲ್​-ಯೂತ್​ ಸ್ಪೋಟ್ಸ್​ ಕ್ಲಬ್​ನ ಸದಸ್ಯರು ತಮ್ಮ ಕೆಲಸಕ್ಕೆ ಒಂದು ದಿನ ರಜೆ ಹಾಕಿ ರಸ್ತೆ ಗುಂಡಿಗಳಿಗೆ ಮಣ್ಣು ಮತ್ತು ಕಲ್ಲು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಪ್ರತಿ ಬಾರಿ ಮಳೆ ಬಂದಾಗಲೂ ಈ ಮಣ್ಣು ಕೊಚ್ಚಿ ಹೋಗಿ ಮತ್ತೆ ಹೊಂಡಗಳು ಸೃಷ್ಟಿಯಾಗುತ್ತಿವೆ. ಮುಠ್ಠಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 500 ಮನೆಗಳಿದ್ದು, ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು, ಲಾರಿ, ಶಾಲಾ ಬಸ್​ಗಳು ಇದೇ ರಸ್ತೆಯಲ್ಲಿ ಸಂಚರಿಸುವುದರಿಂದ ತೀವ್ರ ಸಮಸ್ಯೆ ಉಂಟಾಗುತ್ತಿದೆ.

ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸದಿದ್ದಲ್ಲಿ, ಗ್ರಾಮ ಪಂಚಾಯತಿ ಹಾಗೂ ಪುರಸಭೆ ಎದುರು ಧರಣಿ ನಡೆಸೋದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details