ಭಟ್ಕಳ: ಜಿಲ್ಲಾಡಳಿತದ ಆದೇಶದಂತೆ ತಾಲೂಕಿನಲ್ಲಿ ಕಂಡು ಬರುವ ಕೋವಿಡ್ ಸೋಂಕಿತರನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಸ್ಥಳಾಂತರಿಸುವುದು ನಿಯಮ. ಆದರೆ, ತಾಲೂಕಿನ ಹೃದಯ ಭಾಗವಾದ ಸೋನಾರಕೇರಿ ಸರ್ಕಾರಿ ಹಾಸ್ಟೆಲ್‌ಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಇಲ್ಲಿನ ಸ್ಥಳೀಯರು ಬ್ಯಾರಿಕೇಡ್ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಬಂದ ಸಿಪಿಐ ದಿವಾಕರ್, ಸೋಂಕಿತರ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಸ್ಥಳಾಂತರಿಸಲಾಗುತ್ತಿದೆ ಎಂದು ಸಮಾಧಾನಪಡಿಸಿಲು ಯತ್ನಿಸಿದರು. ಆದರೆ, ಪ್ರತಿಭಟನಾಕಾರರು ಇದಕ್ಕೂ ಜಗ್ಗದೆ ಸ್ಥಳಾಂತರದಿಂದ ನಾಳೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳ ಭವಿಷ್ಯ ಏನಾಗಲಿದೆ ಎಂದು ಪ್ರಶ್ನಿಸಿದರು.